ಅಂಬಿಕಾನಗರ ಗ್ರಾಮ ಪಂಚಾಯ್ತು ಅಧ್ಯಕ್ಷರಾಗಿ ಮೇಘಾ ಮಾರುತಿ ಗೌಡ, ಉಪಾಧ್ಯಕ್ಷರಾಗಿ ಲಕ್ಷ್ಮೀ ಮಾರುತಿ ಕಿಲಾರಿ ಆಯ್ಕೆ

ದಾಂಡೇಲಿ : ತಾಲ್ಲೂಕಿನ ಅಂಬಿಕಾನಗರ ಗ್ರಾ.ಪಂಚಾಯತಿಯ ಎರಡನೇ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯು ಇಂದು ಶುಕ್ರವಾರ ಮಧ್ಯಾಹ್ನ ಜರುಗಿತು.

13 ಸದಸ್ಯರಿರುವ ಅಂಬಿಕಾನಗರ ಗ್ರಾಮ ಪಂಚಾಯ್ತುನಲ್ಲಿ ಅಧ್ಯಕ್ಷ ಹುದ್ದೆಗೆ ಬಿಜೆಪಿ ಬೆಂಬಲಿತ ಮೇಘಾ ಮಾರುತಿ ಗೌಡ ಮತ್ತು ಕಾಂಗ್ರೆಸ್ ಬೆಂಬಲಿತ ಬೊಮ್ಮಿ ಬಾಯಿ ಶಾಮು ತಾಟೆಯವರು ಸ್ಪರ್ಧಿಸಿದ್ದರು. 8 ಮತಗಳನ್ನು ಪಡೆದ ಮೇಘಾ ಮಾರುತಿ ಗೌಡ ಅವರು ಅಧ್ಯಕ್ಷರಾಗಿ ಗೆಲುವಿನ ನಗೆ ಬೀರಿದರು. ಇನ್ನೂ ಉಪಾಧ್ಯಕ್ಷ ಹುದ್ದೆಗೆ ಬಿಜೆಪಿ ಬೆಂಬಲಿತ ಲಕ್ಷ್ಮೀ ಮಾರುತಿ ಕಿಲಾರಿ ಮತ್ತು ಕಾಂಗ್ರೆಸ್ ಬೆಂಬಲಿತ ಕ್ಲೈಮೆಟ್ ಕ್ರಿಸ್ತೋಫರ್ ಅವರು ಸ್ಪರ್ಧಿಸಿದ್ದರು. 8 ಮತಗಳನ್ನು ಪಡೆದ ಲಕ್ಷ್ಮೀ ಮಾರುತಿ ಕಿಲಾರಿಯವರು ಉಪಾಧ್ಯಕ್ಷರಾಗಿ ಚುನಾಯಿತರಾದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತು ಸದಸ್ಯರು, ಬಿಜೆಪಿ ದಾಂಡೇಲಿ ತಾಲ್ಲೂಕು ಘಟಕದ ಅಧ್ಯಕ್ಷರಾದ ಚಂದ್ರಕಾಂತ ಕ್ಷೀರಸಾಗರ, ಪ್ರಧಾನ ಕಾರ್ಯದರ್ಶಿ ಗಿರೀಶ್ ಠೋಸೂರು, ಪಕ್ಷದ ಉಪಾಧ್ಯಕ್ಷ ಸಂಜೀವ್ ಜಾಧವ್, ಬಿಜೆಪಿ ಮಖಂಡ ಟಿ.ಎಸ್.ಬಾಲಮಣಿ, ಅರುಣ್ ಬೋಸ್ಲೆ ಮೊದಲಾದವರು ಉಪಸ್ಥಿತರಿದ್ದರು.