ಕೋಲಾರ ಪೋಲೀಸರ ಭರ್ಜರಿ ಕಾರ್ಯಾಚರಣೆ: ಮೂವರು ಮನೆಗಳ್ಳರ ಬಂಧನ

ಕೋಲಾರ : ಮೂವರು ಮನೆಗಳ್ಳರನ್ನು  ಪೊಲೀಸರು ಬಂಧಿಸುವ ಮೂಲಕ 254 ಗ್ರಾಂ ಚಿನ್ನಾಭರಣ, 500 ಗ್ರಾಂ ಬೆಳ್ಳಿ ವಸ್ತುಗಳು, 2 ಕಾರು ಜಪ್ತಿ ಮಾಡಿದ್ದಾರೆ. ತುಮಕೂರು ಮೂಲದ ಜಗನ್ನಾಥ್, ಚಿಕ್ಕಬಳ್ಳಾಪುರ ಮೂಲದ ಶ್ರೀನಾಥ್, ಉಮಾಶಂಕರ್​ ಬಂಧಿತರು. ಜು.16ರಂದು ಕೋಲಾರದ ಕೀಲುಕೋಟೆ ಬಡಾವಣೆ ಮನೆಯಲ್ಲಿ ಕಳವು ಮಾಡಿದ್ದರು. ಸದ್ಯ ಆ ಕಳ್ಳರನ್ನು ಬಂಧಿಸುವ ಮುಲಕ ಶ್ರೀನಿವಾಸಪುರದಲ್ಲಿ 2 ಕಳವು ಪ್ರಕರಣವನ್ನು ಕೋಲಾರ ಪೊಲೀಸರು ಭೇದಿಸಿದ್ದಾರೆ.