ಚಿಕ್ಕಬಳ್ಳಾಪುರ, (ಜುಲೈ 30): ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಮುಗಿದೆ. ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದೂ 2 ತಿಂಗಳೂ ಆಯ್ತು. ಆದ್ರೆ, ಚಿಕ್ಕಬಳ್ಳಾಪುರದಲ್ಲಿ ಮಾತ್ರ ಶಾಸಕ ವರ್ಸಸ್ ಮಾಜಿ ಸಚಿವರ ನಡುವಿನ ವಾಕ್ಸಮರ ಮಾತ್ರ ನಿಂತಿಲ್ಲ. Dr K Sudhakar ಮತ್ತು ಶಾಸಕ Pradeep Eshwar ನಡುವಿನ ಸವಾಲಿನ ಸಮರ ಜೋರಾಗಿದ್ದು, ಇವತ್ತೂ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್, ಸುಧಾಕರ್ ವಿರುದ್ಧ ಗುಡುಗಿದ್ದಾರೆ. ಇಂದು (ಜುಲೈ 30) ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಪ್ರದೀಪ್ ಈಶ್ವರ್, ಚಿಕ್ಕಬಳ್ಳಾಪುರದಲ್ಲಿ ಮಾಜಿ ಸಚಿವ ಡಾ.ಕೆ.ಸುಧಾಕರ್ ಬೆಂಬಲಿಗರು ಬಾಲ ಬಿಚ್ಚಿದ್ರೆ ಕಟ್ ಮಾಡುತ್ತೇನೆ. ಬೇಕಾದ್ರೆ ಟ್ರೈ ಮಾಡುವುದಕ್ಕೆ ಹೇಳಿ ನೋಡೋಣ ಎಂದು ಸವಾಲು ಹಾಕಿದರು.
ಚಿಕ್ಕಬಳ್ಳಾಪುರದಲ್ಲಿ ಸುಧಾಕರ್ ಬೆಂಬಲಿಗರು ಬಾಲ ಬಿಚ್ಚಿದ್ರೆ ಕಟ್ ಮಾಡುತ್ತೇನೆ. ಬೇಕಾದ್ರೆ ಟ್ರೈ ಮಾಡುವುದಕ್ಕೆ ಹೇಳಿ ನೋಡೋಣ. ಮಾಜಿ ಸಚಿವ ಕೆ. ಸುಧಾಕರ್ ಗೆ ಶಾಸಕ ಪ್ರದೀಪ್ ಈಶ್ವರ್ ಮತ್ತೆ ಸವಾಲು. ನಾನು ದ್ವೇಷ ರಾಜಕಾರಣ, ಗೂಂಡಾಗಿರಿ ರಾಜಕಾರಣ ಮಾಡಲ್ಲ, ಆದ್ರೆ ಗೂಂಡಾಗಿರಿ ರಾಜಕಾರಣ ಮಾಡುವರನ್ನು ಬಿಡಲ್ಲ. ಕ್ಷೇತ್ರದಲ್ಲಿ ನನಗೆ ಸಿಕ್ಕ ಜನ ಬೆಂಬಲ ನೋಡಿ ಸಹಿಸಿಕೊಳ್ಳಲು ಆಗುತ್ತಿಲ್ಲ. ಡಾ.ಕೆ.ಸುಧಾಕರ್ ಸುಳ್ಳು ದೂರು ಕೊಡಿಸಿ ಗಲಭೆ ಸೃಷ್ಟಿಸುತ್ತಿದ್ದಾರೆ. ಐದು ವರ್ಷದಲ್ಲಿ ಚಿಕ್ಕಬಳ್ಳಾಪುರವನ್ನು ಮಾದರಿ ಕ್ಷೇತ್ರ ಮಾಡುತ್ತೇನೆ. ಸುಧಾಕರ್ ರೀತಿಯಲ್ಲಿ ನಾನು ತಪ್ಪು ಮಾಡಲ್ಲ. ಪರ, ವಿರೋಧ ದೂರು ನೀಡಿದ್ದಾರೆ, ತನಿಖೆ ಆಗಿ ಸತ್ಯ ತಿಳಿಯಲಿ ಎಂದು ಸುಧಾಕರ್ ವಿರುದ್ಧ ಮತ್ತೆ ಶಾಸಕ ವಾಗ್ದಾಳಿ ನಡೆಸಿದರು.
ಬೇರೆ ಶಾಸಕರುಗಳ ರೀತಿ ನನಗೆ ರಾಜಕೀಯ ಅಭದ್ರತೆ ಇಲ್ಲ. ನಾನು ಶಾಸಕನಾಗಿದ್ದೆ ಲಾಟರಿ. ನಾನು ಯಾವುದೆ ರಾಜಕೀಯ ಗಿಮಿಕ್ ಮಾಡಲ್ಲ. ಮುಂದೆ ಯಾರಾದರೂ ಒಳ್ಳೆ ಕೆಲಸ ಮಾಡುತ್ತಾರೆ ಅಂದ್ರೆ ಅವರಿಗೆ ಓಟು ಹಾಕಿ ಗೆಲ್ಲಿಸಿ. ನಾನು ಒಳ್ಳೆ ಕೆಲಸ ಮಾಡಿದ್ರೆ ಮುಂದೆ ನನ್ನನ್ನು ಗೆಲ್ಲಿಸಿ. ಬೇರೆಯವರ ರೀತಿ ನಾನು 20-30 ವರ್ಷ ಕಡಿದು ಕಟ್ಟೆ ಹಾಕುತ್ತೇನೆ ಅಂತ ಹೇಳಲ್ಲ. ಕ್ಷೇತ್ರದಲ್ಲಿ ತಪ್ಪು ಯಾರು ಮಾಡಿದರೂ ತಪ್ಪೆ. ಸುಧಾಕರ್ ರೀತಿಯಲ್ಲಿ ನಾನು ತಪ್ಪು ಮಾಡಲ್ಲ. ಪರ ವಿರೋಧ ದೂರು ನೀಡಿದ್ದಾರೆ. ಪೊಲೀಸರು ಕಾನೂನು ಕ್ರಮ ಕೈಗೊಳ್ಳಲಿ ಎಂದರು.