ಆಸ್ಟ್ರೇಲಿಯಾ ವಿರುದ್ಧ ಓವಲ್‌ನಲ್ಲಿ ನಡೆಯುತ್ತಿರುವ 5ನೇ ಆ್ಯಶಸ್ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ತಂಡ 300 ಪ್ಲಸ್ ಮುನ್ನಡೆ ಸಾಧಿಸುವ ಮೂಲಕ ಕಾಂಗರೂಗಳ ವಿರುದ್ಧ ಮುನ್ನಡೆ ಕಾಯ್ದುಕೊಂಡಿದೆ.
ಇಂಗ್ಲೆಂಡ್ ಪರ ಝಾಕ್ ಕ್ರಾಲಿ 73 ರನ್ ಸಿಡಿಸಿದರೆ, ಜೋ ರೂಟ್ ಮತ್ತು ಜಾನಿ ಬೈರ್‌ಸ್ಟೋವ್ 110 ರನ್ಗಳ ಜೊತೆಯಾಟವನ್ನು ಹಂಚಿಕೊಂಡರು. ಈ ನಡುವೆ ಮಾಜಿ ಇಂಗ್ಲೆಂಡ್ ನಾಯಕ ಜೋ ರೂಟ್ 91 ರನ್ ಸಿಡಿಸಿ ವಿಕೆಟ್ ಒಪ್ಪಿಸುವ ಮೂಲಕ 9 ರನ್ಗಳಿಂದ ಶತಕ ವಂಚಿತರಾದರು.
ಈ ಬಾರಿಯ ಆ್ಯಶಸ್ ಸರಣಿಯಲ್ಲಿ ಇದು ರೂಟ್ ಅವರ 6ನೇ ಅರ್ಧಶತಕವಾಗಿದ್ದು, ಈ ಅರ್ಧಶತಕ ಇನ್ನಿಂಗ್ಸ್ ಮೂಲಕ ರೂಟ್ ಹಲವು ದಾಖಲೆಗಳನ್ನು ಮುರಿದರು. ವಾಸ್ತವವಾಗಿ ರೂಟ್ 19 ನೇ ಬಾರಿಗೆ ಟೆಸ್ಟ್ ಸರಣಿಯಲ್ಲಿ 300 ಕ್ಕೂ ಅಧಿಕ ರನ್ ಕಲೆಹಾಕುವ ಮೂಲಕ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಸರಿಗಟ್ಟಿದರು.
ಅಲ್ಲದೆ ಟೆಸ್ಟ್ ಸರಣಿಯಲ್ಲಿ 300 ಕ್ಕೂ ಅಧಿಕ ರನ್ ಬಾರಿಸಿದವರ ಪಟ್ಟಿಯಲ್ಲಿ ವೆಸ್ಟ್ ಇಂಡೀಸ್ ದಿಗ್ಗಜ ಬ್ರಿಯಾನ್ ಲಾರಾ ಮತ್ತು ರಾಹುಲ್ ದ್ರಾವಿಡ್ ಅವರನ್ನು ಹಿಂದಿಕ್ಕಿದರು. ಹಾಗಾದರೆ ಟೆಸ್ಟ್ ಸರಣಿಯಲ್ಲಿ 300 ಕ್ಕೂ ಅಧಿಕ ರನ್ಗಳನ್ನು ಹೆಚ್ಚು ಬಾರಿ ಕಲೆಹಾಕಿದ ಆಟಗಾರರು ಯಾರು ಎಂಬುದನ್ನು ನೋಡುವುದಾದರೆ..
ಸಚಿನ್ ತೆಂಡೂಲ್ಕರ್- 19 ಬಾರಿ
ಜೋ ರೂಟ್- 19 ಬಾರಿ
ಬ್ರಿಯಾನ್ ಲಾರಾ- 18 ಬಾರಿ
ರಾಹುಲ್ ದ್ರಾವಿಡ್- 18 ಬಾರಿ
ರಿಕಿ ಪಾಂಟಿಂಗ್- 17 ಬಾರಿ
ಅಲೆಸ್ಟರ್ ಕುಕ್- 17 ಬಾರಿ