ಪೇಪರ್ ಲೋಡ್ ತುಂಬಿದ್ದ ಲಾರಿ ಅರಬೈಲ್ ಘಟ್ಟದಲ್ಲಿ ಪಲ್ಟಿ

ಯಲ್ಲಾಪುರ: ಚಾಲಕನ ನಿಯಂತ್ರಣ ತಪ್ಪಿ ಲಾರಿಯೊಂದು ಪಲ್ಟಿಯಾದ ಘಟನೆ ರಾಷ್ಟ್ರೀಯ ಹೆದ್ದಾರಿ 63 ರ ಅರಬೈಲ್ ಘಟ್ಟದಲ್ಲಿ ನಡೆದಿದೆ. ದಾಂಡೇಲಿಯಿಂದ ಕೇರಳದ ಕೊಚ್ಚಿಗೆ ಪೇಪರ್ ಲೋಡ್ ಸಾಗಿಸುತ್ತಿದ್ದ ಲಾರಿ ಅರಬೈಲ್ ಘಟ್ಟದ ಯೂಟರ್ನ್ ಬಳಿ ಪಲ್ಟಿಯಾಗಿದೆ. ಅಪಘಾತದಲ್ಲಿ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಅಪಘಾತದ ರಭಸಕ್ಕೆ ಲಾರಿ ಸಂಪೂರ್ಣ ಜಖಂಗೊಂಡಿದೆ. ಲಾರಿಯಲ್ಲಿದ್ದ ಡೀಸೆಲ್ ಹೆದ್ದಾರಿಯ ಮೇಲೆ ಹರಿದು ಸಂಚಾರಕ್ಕೆ ಅಡಚಣೆಯಾಗಿತ್ತು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.