ನೆಲಮಂಗಲ, ಜುಲೈ 24: ಬೇರೆಯವರ ಜಮೀನು ತನ್ನದೆಂದು ತೋರಿಸಿ ಅಡ್ವಾನ್ಸ್ ಹಣ ಪಡೆದು ವಂಚನೆ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನಲ್ಲಿ ನಡೆದಿದೆ. RTGS ಮುಖಾಂತರ 50ಲಕ್ಷ ಹಣ ಪಡೆದು ವಂಚನೆ ಮಾಡಲಾಗಿದೆ. ಬಜ್ಜಣ್ಣ ಅವರಿಗೆ ಸೇರಿದ ಬೆಣಚನಹಳ್ಳಿಯ ಸರ್ವೆ ನಂ 73/5,73/7,73/11, ಸೇರಿದ ಒಂದೂವರೆ ಎಕರೆ ಜಾಗವನ್ನು ತೋರಿಸಿ ಲಕ್ಷ್ಮಿಕಾಂತ್, ಪ್ರಮೋದ್ ಎಂಬ ಇಬ್ಬರು ಹನುಮಂತರಾಜುಗೆ ವಂಚನೆ ಮಾಡಿದ್ದಾರೆ.
ಆರೋಪಿ ಲಕ್ಷ್ಮಿಕಾಂತ್ ತಾನು ಪೊಲೀಸ್ IG ಕಚೇರಿಯಲ್ಲಿ ಕೆಲಸ ಮಾಡುವುದಾಗಿ ನಂಬಿಸಿ ಹನುಮಂತರಾಜು ಅವರ ಬಳಿ 50 ಲಕ್ಷ ಅಡ್ವಾನ್ಸ್ ಹಣ ಪಡೆದಿದ್ದಾಬೆ. ಸದ್ಯ ದಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ IPC420, 419, 408, 468, ಜೊತೆಗೆ 34 ಐಪಿಸಿ ರೀತ್ಯಾ ಪ್ರಕರಣ ದಾಖಲಾಗಿದೆ.