ದಾವಣಗೆರೆ, ಜುಲೈ 21: ನಾಲ್ಕು ಮಕ್ಕಳು ಹಾಗೂ ಪತ್ನಿಯನ್ನ ಬಿಟ್ಟು ವಿವಾಹಿತೆಯೊಬ್ಬಳ ಜೊತೆ ಪತಿ ನಾಪತ್ತೆ ಆಗಿರುವಂತಹ ಶಂಕೆ ವ್ಯಕ್ತಪಡಿಸಲಾಗಿದೆ. ಜಿಲ್ಲೆಯ ಭಗರತ್ ಸಿಂಗ್ ನಗರದಲ್ಲಿ ಘಟನೆ ನಡೆದಿದ್ದು, ಶಫೀ (40) ನಾಪತ್ತೆಯಾದ ಪತಿ. ಪತ್ನಿ ಫಾತೀಮಾ ಭಾನುಳಿಂದ ಕೆಟಿಜೆ ನಗರ ಪೊಲೀಸ್ ಠಾಣೆಗೆ ಈ ಕುರಿತಾಗಿ ದೂರು ನೀಡಲಾಗಿದೆ.
ಸಣ್ಣ ವಯಸ್ಸಿನ ಮೂರು ಗಂಡು ಹಾಗೂ ಒಂದು ಹೆಣ್ಣು ಮಗುವಿನೊಂದಿಗೆ ಫಾತೀಮಾ ಭಾನು ದಿನಕಳೆಯುತ್ತಿದ್ದು, ಮನೆ ಬಾಡಿಗೆ ಹಾಗೂ ರೇಷನ್ಗಾಗಿ ಪರದಾಡುವಂತಾಗಿದೆ. ನಾಪತ್ತೆಯಾದ ಪತಿಯನ್ನ ಹುಡುಕಿಕೊಡಿ ಎಂದು ಪತ್ನಿ ವಿನಂತಿ ಮಾಡಿದ್ದಾಳೆ.