ಬೆಂಗಳೂರು, ಜುಲೈ 20: ನಿನ್ನೆ ಬಂಧನಕ್ಕೊಳಗಾಗಿದ್ದ ಐವರು ಶಂಕಿತ ಉಗ್ರರರ ಪೈಕಿ ಜಾಹಿದ್ ತಬ್ರೇಜ್ ಎಂಬಾತನ ನಿವಾಸದಲ್ಲಿ ಗ್ರೆನೇಡ್ ಪತ್ತೆಯಾಗಿದ್ದು, ಪೊಲೀಸರೇ ನಮ್ಮ ಮನೆಗೆ ಗ್ರೆನೇಡ್ ತಂದು ಇಟ್ಟಿದ್ದಾರೆ ಎಂದು ಶಂಕಿತ ಉಗ್ರ ಜಾಹಿದ್ ತಬ್ರೇಜ್ ಸಹೋದರ ಅವೇಜ್ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಂದು ಬೆಳಗ್ಗೆ ಪೊಲೀಸರು ತಮ್ಮನನ್ನು ಕರೆದುಕೊಂಡು ಬಂದಿದ್ದು, ಗ್ರೆನೇಡ್ ತಂದು ಇಟ್ಟಿದ್ದಾರೆ ಎಂದರು.
ನನ್ನ ಸಹೋದರ ಅಂತಹ ಕೆಲಸ ಮಾಡುವವನಲ್ಲ. ಅಲ್ಯೂಮಿನಿಯಂ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿಕೊಂಡು ತನ್ನಪಾಡಿಗೆ ತಾನಿದ್ದ. ನಾನು ಮತ್ತು ಸಹೋದರ ಇಬ್ಬರೇ ಮನೆಯಲ್ಲಿ ದುಡಿಯವವರು ಎಂದು ತಿಳಿಸಿದರು.
2017ರಲ್ಲಿ ಜುನೈದ್ ಜೊತೆ ಕೇಸ್ವೊಂದರಲ್ಲಿ ಅರೆಸ್ಟ್ ಆಗಿದ್ದ. ಕ್ಯಾಬ್ ಓಡಿಸುವಾಗ ಜುನೈದ್ ಕರೆದೊಯ್ದು ಹೀಗೆ ಮಾಡಿದ್ದ. ಬಳಿಕ ಜುನೈದ್ ಸಹವಾಸವನ್ನೇ ಜಾಹಿದ್ ತಬ್ರೇಜ್ ಬಿಟ್ಟಿದ್ದ. ನಾವು ಸಂಸಾರಸ್ಥರು, ನಾವು ಏಕೆ ಗ್ರೆನೇಡ್ ಇಟ್ಟುಕೊಳ್ಳುತ್ತೇವೆ. ನನ್ನ ತಮ್ಮ ಈ ರೀತಿಯ ಕೆಲಸ ಮಾಡುವುದಿಲ್ಲ ಎಂದು ಹೇಳಿದ್ದಾರೆ.