ಕೌಟುಂಬಿಕ ಕಲಹ, ಪತ್ನಿಯನ್ನು ಕೊಂದು ಎಸ್ಕೇಪ್ ಆದ ಪತಿ

ಕೋಲಾರ, ಜುಲೈ 19: ಕೌಟುಂಬಿಕ ಕಲಹ ಹಿನ್ನೆಲೆ ಪತಿಯೇ ಪತ್ನಿಯನ್ನು ಕೊಂದ ಧಾರುಣ ಘಟನೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ರಾಜೀವ್ ನಗರದಲ್ಲಿ ನಡೆದಿದೆ. ಪತ್ನಿ ಶಹನಾಜ್​(30)ನನ್ನು ಪತಿ ರಫೀಕ್(40) ಕೊಲೆ ಮಾಡಿ ಪರಾರಿಯಾಗಿದ್ದಾನೆ. ಆರೋಪಿ ರಫೀಕ್​ಗಾಗಿ ಮಾಲೂರು ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಡರಾತ್ರಿ ಗಂಡ-ಹೆಂಡತಿ ನಡುವೆ ಜಗಳ ಶುರುವಾಗಿತ್ತು. ಈ ವೇಳೆ ಜಗಳ ವಿಪರೀತಕ್ಕೆ ಹೋಗಿ ರಫಿಕ್ ತನ್ನ ಹೆಂಡತಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದಾನೆ. ಆರೋಪಿ ರಫಿಕ್ ಜೆಸಿಬಿ ಆಪರೇಟರ್ ಆಗಿದ್ದರು.