ಭುವನೇಶ್ವರ: ಕಂಠಪೂರ್ತಿ ಕುಡಿದ ವ್ಯಕ್ತಿಗೆ ಕೆಲವೊಮ್ಮೆ ತಾನು ಏನು ಮಾಡುತ್ತಿದ್ದೇನೆ ಎಂಬುದು ತಿಳಿದಿರಲ್ಲ. ಆತ ತಾನು ಮಾಡುತ್ತಿರುವುದೇ ಸರಿ ಅಂದುಕೊಂಡಿರುತ್ತಾನೆ. ಅಂತೆಯೇ ಕುಡಿದ ಮತ್ತಿನಲ್ಲಿ ಇಬ್ಬರು ವ್ಯಕ್ತಿಗಳು ಅರ್ಧ ಸುಟ್ಟ ಯುವತಿಯ ಮೃತದೇಹವನ್ನು ತಿಂದ ಪ್ರಸಂಗವೊಂದು ಒಡಿಶಾದಲ್ಲಿ ನಡೆದಿದೆ.
ಈ ಘಟನೆ ಮಯೂರ್‍ಬಂಜ್ ಜಿಲ್ಲೆಯ ಬದಶಾಹಿ ಬ್ಲಾಕ್‍ನ ಗ್ರಾಮವೊಂದರಲ್ಲಿ ನಡೆದಿದೆ. ಅನಾರೋಗ್ಯದಿಂದ ಗ್ರಾಮದ 25 ವರ್ಷದ ಯುವತಿಯೊಬ್ಬಳು ಮೃತಪಟ್ಟಿದ್ದಳು. ಹೀಗಾಗಿ ಆಕೆಯ ಮೃತದೇಹವನ್ನು ಸ್ಥಳೀಯ ಶಾವಾಗಾರಕ್ಕೆ ಸಾಗಿಸಿ ಅಲ್ಲಿ ಅಂತ್ಯಕ್ರಿಯೆಯನ್ನು ಕುಟುಂಬಸ್ಥರು ನೆರವೇರಿಸಿದ್ದಾರೆ. ಆದರೆ ಆಕೆಯ ದೇಹ ಪೂರ್ತಿಯಾಗಿ ಸುಟ್ಟಿರಲಿಲ್ಲ.
ಈ ವೇಳೆ ವಿಪರೀತ ಕುಡಿದು ತೂರಾಡುತ್ತಿದ್ದ ಇಬ್ಬರು ವ್ಯಕ್ತಿಗಳು ಅಲ್ಲಿಗೆ ಬಂದು ಅರ್ಧಸುಟ್ಟ ಮೃತದೇಹವನ್ನು ತಿನ್ನುತ್ತಿದರು. ಇದನ್ನು ಗಮನಿಸಿದ ಸ್ಥಳೀಯರು ಇಬ್ಬರೂ ಹಿಡಿದು ಚೆನ್ನಾಗಿ ಥಳಿಸಿದ್ದಾರೆ. ಬಳಿಕ ಇಬ್ಬರನ್ನೂ ಸ್ಥಳೀಯ ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ಇಬ್ಬರನ್ನು ವೀಚಾರಣೆಗೆ ಒಳಪಡಿಸಿದ್ದಾರೆ. ಘಟನೆಯ ಕುರಿತು ಪೊಲೀಸ್ ಸಿಬ್ಬಂದಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಈ ಸಂಬಂಧ ಪ್ರತ್ಯಕ್ಷದರ್ಶಿ ಲಾಬಾ ಸಿಂಗ್ ಪ್ರತಿಕ್ರಿಯಿಸಿ, ದೇಹದ ಕೆಲವು ಭಾಗವು ಸಂಪೂರ್ಣವಾಗಿ ಸುಟ್ಟುಹೋಗಿಲ್ಲ ಎಂದು ಇಬ್ಬರೂ ಗಮನಿಸಿದರು. ನಂತರ ಅವರು ಮಾಂಸವನ್ನು ಕೆಲವು ತುಂಡುಗಳಾಗಿ ಕತ್ತರಿಸಿ ಸೇವಿಸಿದ್ದಾರೆ ಎಂದು ಆರೋಪಿಸಿದರು.