ಬೆಂಗಳೂರು: ನೀವು New Sim ತೆಗೆದುಕೊಳ್ಳುತ್ತಿದ್ದರೆ ಎಚ್ಚರದಿಂದ ಇರುವುದು ಒಳ್ಳೆಯದು. ಸ್ವಲ್ಪ ಯಾಮಾರಿದರೂ ನಿಮ್ಮ ಖಾತೆಯಲ್ಲಿರುವ ಹಣ ಮಾಯವಾಗಬಹುದು. ಹೌದು ಹೊಸ ಸಿಮ್ ಆ್ಯಕ್ಟಿವೇಷನ್ ವೇಳೆ ಒಟಿಪಿ ಪಡೆದು ಉದ್ಯಮಿಯೊಬ್ಬರ ಬ್ಯಾಂಕ್ ಖಾತೆಯಿಂದ 2.5 ಲಕ್ಷ ಹಣ ವಂಚನೆ ಮಾಡಿದ ಘಟನೆ ನಗರದ ಚಿಕ್ಕಸಂದ್ರದಲ್ಲಿ ನಡೆದಿದೆ. ಉದ್ಯಮಿ ಶಿವಕುಮಾರ್ಗೆ ವಂಚನೆಗೊಳಗಾದವರು. ಬ್ಯಾಂಕ್ ಖಾತೆಗೆ ಲಿಂಕ್ ಆಗಿದ್ದ ಸಿಮ್ ಕಾರ್ಡ್ ಡೆಡ್ ಆದ ಹಿನ್ನೆಲೆ ಹೊಸ ಸಿಮ್ ಖರೀದಿ ಮಾಡಿದ್ದಾರೆ. ಬಳಿಕ ಸಿಮ್ ಅಕ್ಟಿವೇಶನ್ ವೇಳೆ ಓಟಿಪಿಯನ್ನ ಪಡೆದು, ಬ್ಯಾಂಕ್ ಖಾತೆಯಲ್ಲಿದ್ದ ಲಕ್ಷಾಂತರ ರೂಪಾಯಿಗೆ ಕನ್ನ ಹಾಕಿದ್ದಾರೆ. ಈ ಕುರಿತು ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.