ಕ್ಯಾಲಿಫೋರ್ನಿಯಾ ವಿಮಾನ ನಿಲ್ದಾಣದ ಬಳಿ Plane Crash ಗೊಂಡಿದ್ದು 6 ಮಂದಿ ಸಾವನ್ನಪ್ಪಿದ್ದಾರೆ. ಯುಎಸ್ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ಪ್ರಕಾರ, ಲಾಸ್ ಏಂಜಲೀಸ್ನಿಂದ ಆಗ್ನೇಯಕ್ಕೆ 130 ಕಿ.ಮೀ ದೂರದಲ್ಲಿರುವ ಮುರಿಯೇಟಾದಲ್ಲಿ ಸಂಜೆ 4.15ರ ಸುಮಾರಿಗೆ ಅವಘಡ ಸಂಭವಿಸಿದೆ.
ಈ ಅಪಘಾತದಲ್ಲಿ ಸಂಭವಿಸಿದ ಬೆಂಕಿಯಿಂದಾಗಿ ಒಂದು ಎಕರೆಯಲ್ಲಿ ನೆಟ್ಟಿದ್ದ ಗಿಡಗಳು ಕೂಡ ಸುಟ್ಟು ಭಸ್ಮವಾಗಿವೆ. ಈ ವೇಳೆ ವಿಮಾನದಲ್ಲಿರುವವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ. ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಟ್ಟಿದ್ದಾರೆ.
ಅಮೆರಿಕದ ಫೆಡರಲ್ ಸಿವಿಲ್ ಏವಿಯೇಷನ್ ಡಿಪಾರ್ಟ್ಮೆಂಟ್ ಈ ವಿಮಾನ ಅಪಘಾತದ ಕುರಿತು ರಾಷ್ಟ್ರೀಯ ಸಾರಿಗೆ ಭದ್ರತಾ ಮಂಡಳಿ ತಂಡದೊಂದಿಗೆ ತನಿಖೆ ನಡೆಸುತ್ತಿದೆ.
ವರದಿಯ ಪ್ರಕಾರ, ಸೆಸ್ನಾ C550 ವಿಮಾನವು ಲಾಸ್ ವೇಗಾಸ್‌ನಿಂದ ಕ್ಯಾಲಿಫೋರ್ನಿಯಾಗೆ ಹೋಗುತ್ತಿತ್ತು. ವಿಮಾನವು ಲಾಸ್ ವೇಗಾಸ್‌ನ ಹ್ಯಾರಿ ರೀಡ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮುಂಜಾನೆ 3.15 ಕ್ಕೆ ಟೇಕಾಫ್ ಆಗಿದ್ದು, ಕ್ಯಾಲಿಫೋರ್ನಿಯಾದ ಮುರ್ರಿಯೆಟಾ ನಗರದ ವಿಮಾನ ನಿಲ್ದಾಣದ ಬಳಿ ಪತನಗೊಂಡಿತ್ತು.
ಇದಕ್ಕೂ ಮುನ್ನ ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ವಿಮಾನವೊಂದು ಮಂಗಳವಾರ ಟೇಕ್ ಆಫ್ ಆದ ಕೆಲವೇ ದಿನಗಳಲ್ಲಿ ಪತನಗೊಂಡು ಓರ್ವ ಪ್ರಯಾಣಿಕ ಮೃತಪಟ್ಟು ಇತರ ಮೂವರು ಗಾಯಗೊಂಡಿದ್ದರು.