ಸೇಲ್ಸ್ ಮ್ಯಾನ್ ಕುತ್ತಿಗೆಗೆ ಲಾಂಗ್ ಇಟ್ಟು, ಹಣದ ಜೊತೆ ಚೆಕ್ ಕಿತ್ತು ಕ್ಷಣಾರ್ಧದಲ್ಲಿ ಪರಾರಿಯಾದ ಖದೀಮರು

ಬೆಂಗಳೂರು ಗ್ರಾಮಾಂತರ: ಸೇಲ್ಸ್ ಮ್ಯಾನ್ ಕುತ್ತಿಗೆಗೆ ಲಾಂಗ್ ಇಟ್ಟು, ಹಣದ ಜೊತೆ ಚೆಕ್ ಕಿತ್ತು ಕ್ಷಣಾರ್ಧದಲ್ಲಿ ಪರಾರಿಯಾದ ಘಟನೆ ಜಿಲ್ಲೆಯ ನೆಲಮಂಗಲ  ತಾಲೂಕಿನ ಇಸ್ಲಾಂಪುರ ಕ್ರಾಸ್ ಬಳಿ ನಡೆದಿದೆ. SMS ಏಜೆನ್ಸಿ ಹಿಂದೂಸ್ಥಾನ್ ಯೂನಿವರ್ಸ್ ಸೇಲ್ಸ್ ಮ್ಯಾನ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಕುಮಾರ್ ಎಂಬಾತನ ಬಳಿ ಪ್ರತ್ಯೇಕ ಎರಡು ಬೈಕ್​ನಲ್ಲಿ ಬಂದಿದ್ದ ಇಬ್ಬರು ದುಷ್ಕರ್ಮಿಗಳು, ಕುತ್ತಿಗೆಗೆ ಲಾಂಗ್ ಇಟ್ಟು, 10ಸಾವಿರ ನಗದು 20ಸಾವಿರದ ಚೆಕ್ ಕಿತ್ತುಕೊಂಡು ಕ್ಷಣಾರ್ಧದಲ್ಲಿ ಪರಾರಿಯಾಗಿದ್ದಾರೆ. ಸ್ಥಳಕ್ಕೆ ನೆಲಮಂಗಲ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.