ಹುತಾತ್ಮ ಯೋಧನ ಪುತ್ಥಳಿ ನಿರ್ಮಾಣಕ್ಕೆ 10 ವರ್ಷದಿಂದ ಮೀನಮೇಷ, ಮೀಸಲಿಟ್ಟ ಉದ್ಯಾನವನ ಜಾಗ ಅತಿಕ್ರಮಣವಾಗಿದೆ!

ಆತ ವೀರಯೋಧ. ದೇಶಕ್ಕಾಗಿ ತನ್ನ ಪ್ರಾಣ ತ್ಯಾಗ ಮಾಡಿದ ಸೈನಿಕ. ಅಂದು ಜಿಲ್ಲಾಡಳಿತ ಹಾಗೂ ಗ್ರಾಮಸ್ಥರು ಸರಕಾರಿ ಗೌರವದೊಂದಿಗೆ ಆ ಯೋದನ ಅಂತ್ಯಸಂಸ್ಕಾರ ಮಾಡಿದ್ರು. ದೌರ್ಭಾಗ್ಯವೆಂದರೆ ಹತ್ತು ವರ್ಷವೇ ಕಳೆದರೂ ಹುತಾತ್ಮನಿಗಾಗಿ ಪುತ್ಥಳಿ ನಿರ್ಮಾಣ ಹಾಗೂ ಉದ್ಯಾನವನ ಮಾಡ್ತಾಯಿಲ್ಲ. ಹುತಾತ್ಮ ಸೈನಿಕ ಪುತ್ಥಳಿ ಹಾಗೂ ಉದ್ಯಾನವನಕ್ಕೆ ಮೀಸಲಿಟ್ಟ ಜಾಗವನ್ನು ಅತಿಕ್ರಮ ಮಾಡಲಾಗಿದೆ. ಹೀಗಾಗಿ  ಹುತಾತ್ಮ ಯೋಧನ ಸಹೋದರ ಜಿಲ್ಲಾಡಳಿತ ವಿರುದ್ಧ ರೊಚ್ಚಿಗೆದ್ದಿದ್ದಾನೆ. ಪುತ್ಥಳಿ ಮಾಡಿ, ಇಲ್ಲವಾದರೆ ಪಾರ್ಥಿವ ಶರೀರವನ್ನು ನಮಗೆ ನೀಡಿ ಎಂದು ಸರ್ಕಾರಕ್ಕೆ ಪಟ್ಟು ಹಿಡಿದ್ದಾನೆ. ಹುತಾತ್ಮ ಯೋಧನ ಜಾಗ ಅತಿಕ್ರಮಣ.. ಅತಿಕ್ರಮಣ ಮಾಡಿಕೊಂಡು, ತಿಪ್ಪೆ, ಷೆಡ್ ಹಾಗೂ ಕಟ್ಟಡ ಕಾಮಗಾರಿ ನಡೆದಿದೆ. ಇನ್ನೊಂದೆಡೆ ಗದಗ ಜಿಲ್ಲಾ ಪಂಚಾಯತ್ ಸಿಇಓ ವಿರುದ್ಧ ಮಾಜಿ ಸೈನಿಕರು ಹಾಗೂ ಹುತಾತ್ಮ ಯೋಧನ ಸಹೋದರನ ಆಕ್ರೋಶ.. ಈ ಚಿತ್ರಣ ಕಂಡಿದ್ದು ಗದಗ (Gadag) ತಾಲೂಕಿನ ಕೋಟುಮಚಗಿ ಗ್ರಾಮದಲ್ಲಿ.

ಹುತಾತ್ಮ ಯೋಧನ ಪಾರ್ಥಿವ ಶರೀರ ಅಂತ್ಯಕ್ರಿಯೆ ಮಾಡಿ ಬರೊಬ್ಬರಿ ಹತ್ತು ವರ್ಷವಾಗಿದೆ…! ಜಿಲ್ಲಾಡಳಿತದ ನಿರ್ಲಕ್ಷ್ಯ ವಿರುದ್ಧ ರೊಚ್ಚಿಗೆದ್ದ ಕುಟುಂಬ ಪಾರ್ಥಿವ ಶರೀರ ನೀಡುವಂತೆ ಇದೀಗ ಪಟ್ಟು ಹಿಡಿದಿದೆ…! ಹುತಾತ್ಮ ಯೋಧನ ಸಹೋದರನಿಂದ ಸರ್ಕಾರಕ್ಕೆ ಖಡಕ್ ಎಚ್ಚರಿಕೆ ರವಾನೆಯಾಗಿದೆ..! ಹುತಾತ್ಮ ಯೋಧನ ಪುತ್ಥಳಿಗೆ ಮೀಸಲಿಟ್ಟ ಜಾಗ ಅತಿಕ್ರಮಣವಾಗಿದೆ..! ಅತಿಕ್ರಮಣ ತೆರವು ಮಾಡಿ, ಪುತ್ಥಳಿ ಹಾಗೂ ಉದ್ಯಾನವನ ನಿರ್ಮಾಣ ಮಾಡಿ, ಇಲ್ಲವಾದರೆ ಪಾರ್ಥಿವ ಶರೀರ ನೀಡಿ ಎಂಬ ಸಾತ್ವಕ ಬೇಡಿಕೆ ಜಿಲ್ಲಾಡಳಿತದ ಮುಂದಿದೆ..!

2014 ರಲ್ಲಿ ಕೋಟುಮಚಗಿ ಗ್ರಾಮದ ಯೋಧ ಬಸವರಾಜ್ ರಮಾಣಿ, ಅರುಣಾಚಲ ಪ್ರದೇಶದಲ್ಲಿ ಸೇನಾ ವಾಹನದಲ್ಲಿ ಯೋಧರು ಹೋಗುವಾಗ ಗುಡ್ಡ ಕುಸಿದು ವೀರ ಮರಣ ಹೊಂದಿದ್ದ. ಅಂದು ಸ್ವಗ್ರಾಮ ಜೋಟುಮಚಗಿ ಗ್ರಾಮಕ್ಕೆ ಪ್ರಾರ್ಥಿವ ಶರೀರ ಆಗಮಿಸಿದಾಗ ಗ್ರಾಮ‌ ಪಂಚಾಯತ್ ಹಾಗೂ ಗದಗ ಜಿಲ್ಲಾಡಳಿತ ಸಕಲ ಸರ್ಕಾರಿ ಗೌರವದೊಂದಿಗೆ ಗ್ರಾಮ ಪಂಚಾಯತ್ ಜಾಗದಲ್ಲಿ ಅಂತ್ಯ ಸಂಸ್ಕಾರ ಮಾಡಿದರು. ಕೋಟುಮಚಗಿ ಗ್ರಾಮದಲ್ಲಿನ 130/130 ಪೂಟ್ ಜಾಗವನ್ನು ಹುತಾತ್ಮ ಯೋಧನ ಪುತ್ಥಳಿ ಹಾಗೂ ಉದ್ಯಾನವನ ನಿರ್ಮಾಣ ಮಾಡಲು ಗ್ರಾಮ ಪಂಚಾಯತ್ ವತಿಯಿಂದ ಠರಾವು ಪಾಸ್ ಮಾಡಲಾಗಿತ್ತು.