ಎಣ್ಣೆ ಏಟಿನಲ್ಲಿ ಪತಿ ಪ್ರತಿನಿತ್ಯ ಜಗಳ- ನೇಣಿಗೆ ಕೊರಳೊಡ್ಡಿದ ಪತ್ನಿ

ಚಾಮರಾಜನಗರ: ಕುಡಿದು ಬಂದು ಪ್ರತಿನಿತ್ಯ ಜಗಳವಾಡುತ್ತಿದ್ದ ಪತಿಯಿಂದಾಗಿ ಪತ್ನಿ ನೇಣಿಗೆ ಕೊರಳೊಡ್ಡಿದ ಘಟನೆಯೊಂದು ಚಾಮರಾಜನಗರದಲ್ಲಿ ನಡೆದಿದೆ.

ರೂಪಾ (32) ಆತ್ಮಹತ್ಯೆಗೆ ಶರಣಾದಾಕೆ. ಈ ಘಟನೆ ಗುಂಡ್ಲುಪೇಟೆ ತಾಲೂಕಿನ ಬೆಳಚಲವಾಡಿ ಗ್ರಾಮದಲ್ಲಿ ನಡೆದಿದೆ. ರೂಪಾ 6 ವರ್ಷದ ಹಿಂದೆ ಮಂಜುನಾಥ್ ನನ್ನು ವಿವಾಹವಾಗಿದ್ದರು. ಆದರೆ ಕೌಟುಂಬಿಕ ಕಲಹದಿಂದಾಗಿ ನೇಣು ಬಿಗಿದುಕೊಂಡು ರೂಪಾ ಸಾವಿನ ದಾರಿ ಹಿಡಿದಿದ್ದಾರೆ. 

ಮಂಜುನಾಥ್ ಪ್ರತಿನಿತ್ಯ ಕುಡಿದು ಬಂದು ರೂಪಾ ಜೊತೆ ಕ್ಲುಲ್ಲಕ ವಿಚಾರಕ್ಕೆ ಜಗಳ ಮಾಡುತ್ತಿದ್ದನು. ಸಾಕಷ್ಟು ಬಾರಿ ಇದನ್ನು ಸಹಿಸಿಕೊಂಡಿದ್ದ ರೂಪಾ ಇದೀಗ ತನ್ನ ತಾಳ್ಮೆ ಕಳೆದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಘಟನೆ ಸಂಬಂಧ ಪೊಲೀಸರು ಪತಿ ಮಂಜುನಾಥ್‍ನನ್ನು ವಶಕ್ಕೆ ಪಡೆದಿದ್ದಾರೆ. ಈ ಕುರಿತು ತೆರಕಣಾಂಬಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.