ಆಂಧ್ರಪ್ರದೇಶ: ದೇವಾಲಯಗಳಲ್ಲೂ ಕೂಡ ಅಕ್ರಮವನ್ನು ಮಾಡುತ್ತಾರೆ ಎಂಬುದಕ್ಕೆ ಇದು ಉದಾಹರಣೆ ನೋಡಿ, ಹೌದು ತಿರುಪತಿ ತಿಮ್ಮಪ್ಪ ದರ್ಶನಕ್ಕೆ ವಿಐಪಿ ಟಿಕೆಟ್ನ್ನು 42,000 ರೂ.ಗೆ ಮಾರಾಟ ಮಾಡಿರುವ ಅಲ್ಲಿನ ಸಿಬ್ಬಂದಿಯನ್ನು ಬಂಧಿಸಲಾಗಿದೆ. ಹೌದು ತಿರುಪತಿ ತಿಮ್ಮಪ್ಪ ದೇವಸ್ಥಾನದ (ಟಿಟಿಡಿ) ಸಿಬ್ಬಂದಿಯೊಬ್ಬರು ಗುರುವಾರ ದೇವಸ್ಥಾನದ ಪಟ್ಟಣದಲ್ಲಿ ವಿಐಪಿ ದರ್ಶನದ ಟಿಕೆಟ್‌ಗಳನ್ನು ಬ್ಲಾಕ್ ಮಾರ್ಕೆಟಿಂಗ್‌ನಲ್ಲಿ ಮಾರಾಟ ಮಾಡಿದ್ದಾರೆ ಎಂದು ಹೇಳಲಾಗಿದೆ.
ಈ ಕೃತ್ಯವನ್ನು ದೇವಾಲಯದ ಉದ್ಯೋಗಿ, ಶಂಕರ್ ಮಾಡಿದ್ದಾನೆ ಎಂದು ಗುರುತಿಸಲಾಗಿದ್ದು, ಹೈದರಾಬಾದ್‌ನ ಭಕ್ತರೊಬ್ಬರು ಆರು ಟಿಕೆಟ್‌ಗಳನ್ನು 42,000 ರೂ.ಗೆ ಖರೀದಿಸಲಾಗಿದೆ. ಆದರೆ ನಿಜವಾದ ಟಿಕೆಟ್ ಬೆಲೆ ಕೇವಲ 3,000 ರೂ.
ಟಿಟಿಡಿಯ ವಿಜಿಲೆನ್ಸ್ ಮತ್ತು ಸೆಕ್ಯುರಿಟಿ ವಿಭಾಗಕ್ಕೆ ಈ ಅಕ್ರಮದ ಬಗ್ಗೆ ಮಾಹಿತಿ ನೀಡಿದ್ದು, ಭಕ್ತರೊಬ್ಬರು ತಮ್ಮ ಕುಟುಂಬದ ಜತೆಗೆ ತಿರುಪತಿಗೆ ಬಂದಿದ್ದು, ಈ ಸಮಯದಲ್ಲಿ ವೈಕುಂಟಂ ಕ್ಯೂ ಕಾಂಪ್ಲೆಕ್ಸ್‌ನಲ್ಲಿ ದರ್ಶನ ಟಿಕೆಟ್ ಕೌಂಟರ್‌ನಲ್ಲಿ ವಿರಾಮದ ಬಗ್ಗೆ ತನಿಖೆ ನಡೆಸಿದಾಗ ಶಂಕರ್ ಎಂಬ ವ್ಯಕ್ತಿ ಹೈದರಾಬಾದ್ ಮೂಲದ ಭಕ್ತರೊಬ್ಬರ ಕುಟುಂಬಕ್ಕೆ ದರ್ಶನದ ಟಿಕೆಟ್‌ಗಳನ್ನು 42,000 ರೂ.ಗೆ ಮಾರಾಟ ಮಾಡಿರುವ ಬಗ್ಗೆ ತಿಳಿದು ಬಂದಿದೆ.
ಸ್ಥಳೀಯ ಎಂಎಲ್‌ಸಿಯ ಶಿಫಾರಸು ಪತ್ರವನ್ನು ದುರುಪಯೋಗಪಡಿಸಿಕೊಂಡು ಶಂಕರ್ ಟಿಕೆಟ್ ಪಡೆದಿದ್ದರು ಎಂದು ವರದಿಯಾಗಿದೆ. ನಂತರ ವಿಜಿಲೆನ್ಸ್ ವಿಭಾಗವು ತಿರುಮಲ 2 ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.
ಟಿಟಿಡಿ ಅಧಿಕಾರಿಗಳು ಟಿಕೆಟ್ ಖರೀದಿಸಲು ಮಧ್ಯವರ್ತಿಗಳನ್ನು ಸಂಪರ್ಕಿಸದಂತೆ ಭಕ್ತರಿಗೆ ಮನವಿ ಮಾಡಿದ್ದಾರೆ. ದೇವರ ದರ್ಶನ ಪಡೆಯಲು ಪಾರದರ್ಶಕತೆಯುತ ಟಿಕೆಟ್ ಬೆಲೆಯನ್ನು ಬಗ್ಗೆ ಟಿಟಿಡಿ ವೆಬ್ಸೈಟ್ನಲ್ಲಿ ತಿಳಿದುಕೊಳ್ಳಬಹುದು ಮತ್ತು ಅಲ್ಲಿಯೇ ಟಿಕೆಟ್ ಬುಕ್ ಮಾಡಬಹುದು ಎಂದು ಆಡಳಿತ ಮಂಡಳಿ ಹೇಳಿದೆ.