ಯಾದಗಿರಿ: ಹುಡುಗಿಯರನ್ನು ನಿಭಾಯಿಸಲು ಮತ್ತು ಶೋಕಿಗಾಗಿ ಐಷಾರಾಮಿ ಬೈಕ್‌ಗಳನ್ನು ಕಳ್ಳತನ ಮಾಡುತ್ತಿದ್ದ ಇಬ್ಬರು ಅಂತರ್ ಜಿಲ್ಲಾ ಬೈಕ್ ಕಳ್ಳರನ್ನು ಯಾದಗಿರಿ ಪೊಲೀಸರು ಬಂಧಿಸಿದ್ದಾರೆ.
ಜಿಲ್ಲೆಯಲ್ಲಿ ಇತ್ತೀಚಿಗೆ ಬೈಕ್ ಕಳ್ಳತನಗಳು ಹೆಚ್ಚಾಗಿ ನಡೆಯುತ್ತಿವೆ. ಯಾದಗಿರಿ, ಶಹಾಪುರ ನಗರ ಸೇರಿದಂತೆ ಜಿಲ್ಲೆಯ ನಾನಾ ಭಾಗದಲ್ಲಿ ಸಾಕಷ್ಟು ಬೈಕ್ ಕಳ್ಳತನವಾಗಿರುವ ವರದಿಯಾಗುತ್ತಿದೆ. ಇದಕ್ಕೆ ಉದಾಹರಣೆ ಎಂಬಂತೆ ಕೆಂಭಾವಿ ಪೊಲೀಸರು ಇಬ್ಬರು ಅಂತರ್ ಜಿಲ್ಲಾ ಬೈಕ್ ಕಳ್ಳರನ್ನು ಬಂಧಿಸಿದ್ದಾರೆ. ಕೆಂಭಾವಿ ಠಾಣೆಯ ಪಿಎಸ್‌ಐ ಕೆಂಭಾವಿ ಪಟ್ಟಣದಲ್ಲಿ ಗಸ್ತು ನಡೆಸುತ್ತಿದ್ದರು. ಇದೇ ವೇಳೆ ಪಟ್ಟಣದಲ್ಲಿ ಇಬ್ಬರು ಯವಕರು ಬೈಕ್ ಜೊತೆ ಅನುಮಾನಸ್ಪದ ರೀತಿಯಲ್ಲಿ ಕಂಡಿದ್ದಾರೆ. ಕೂಡಲೇ ಅವರಿಬ್ಬರನ್ನು ವಶಕ್ಕೆ ಪಡೆದು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಿದ್ದಾರೆ.
ವಶಕ್ಕೆ ಪಡೆದ ಇಬ್ಬರನ್ನು ವಿಚಾರಣೆ ನಡೆಸಿದಾಗ, ಒಬ್ಬ ಹುಣಸಗಿ ತಾಲೂಕಿನ ಕನಗಂಡನಹಳ್ಳಿ ತಾಂಡ ನಿವಾಸಿ ದೇವರಾಜ್ ಹಾಗೂ ಇನ್ನೋರ್ವ ಸುರಪುರ ತಾಲೂಕಿನ ಪೀರಾ ನಾಯಕ ತಾಂಡದ ಯುವಕ ಶಶಿಕುಮಾರ್ ಎಂದು ತಿಳಿದುಬಂದಿದೆ. ಇಬ್ಬರನ್ನು ಬೈಕ್ ಸಮೇತ ವಶಕ್ಕೆ ಪಡೆದಿದ್ದು, ವಿಚಾರಣೆ ವೇಳೆ ಒಂದಲ್ಲ, ಎರಡಲ್ಲ ಸುಮಾರು 20 ಬೈಕ್‌ಗಳನ್ನು ಕದ್ದು ಮಾರಾಟ ಮಾಡಲು ಪ್ಲಾನ್ ಮಾಡಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಈ ಇಬ್ಬರು ಯುವಕರು ಓದು ಅರ್ಧಕ್ಕೆ ಬಿಟ್ಟು ಶೋಕಿ ಜೀವನ ನಡೆಸಲು ಮುಂದಾಗಿದ್ದರು. ಇಬ್ಬರೂ ಜೇಬಲ್ಲಿ ಕಾಸು ಇರೋ ತನಕ ಶೋಕಿ ಜೀವನ ನಡೆಸುತ್ತಿದ್ದರು. ಇಷ್ಟು ಸಾಲದ್ದಕ್ಕೆ ಇಬ್ಬರಿಗೂ ಗರ್ಲ್‌ಫ್ರೆಂಡ್ಸ್ ಇದ್ದಾರೆ ಎಂದು ತಿಳಿದು ಬಂದಿದೆ. ಜೇಬಲ್ಲಿ ಕಾಸು ಖಾಲಿಯಾಗುತ್ತಿದ್ದ ಹಾಗೆ ಹುಡುಗಿಯರನ್ನು ನಿಭಾಯಿಸಲು ಕಳ್ಳತನದ ಹಾದಿಯನ್ನ ಹಿಡಿದಿದ್ದರು ಎಂದು ಹೇಳಲಾಗುತ್ತಿದೆ. ಇದೇ ಕಾರಣಕ್ಕೆ ಜನ ಜಂಗುಳಿ ಇರುವಂತಹ ಪ್ರದೇಶದಲ್ಲಿ ನಿಲ್ಲಿಸಿದ ಬೈಕ್‌ಗಳನ್ನು ಡುಪ್ಲಿಕೇಟ್ ಕೀ ಬಳಸಿ ಕಳ್ಳತನ ಮಾಡುತ್ತಿದ್ದರು.
ಇವರಿಬ್ಬರು ಸೇರಿಕೊಂಡು ಯಾದಗಿರಿ, ವಿಜಯಪುರ ಹಾಗೂ ರಾಯಚೂರು ಜಿಲ್ಲೆಯ ನಾನಾ ಠಾಣಾ ವ್ಯಾಪ್ತಿಯಲ್ಲಿ ಸುಮಾರು 20 ಬೈಕ್‌ಗಳು ಹಾಗೂ ಒಂದು ಕಾರು ಸಹ ಕಳ್ಳತನ ಮಾಡಿರುವುದಾಗಿ ವಿಚಾರಣೆ ವೇಳೆ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾರೆ. ಇವರಿಬ್ಬರೂ ಸಾಮಾನ್ಯ ಬೈಕ್‌ಗಳನ್ನು ಕದಿಯುತ್ತಿರಲಿಲ್ಲ. ಬದಲಿಗೆ ಐಷಾರಾಮಿ ಬೈಕ್‌ಗಳು, ಹೆಚ್ಚಿನ ಬೆಲೆಯ ಬೈಕ್‌ಗಳನ್ನು ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದರು. ವಿಶೇಷವಾಗಿ ರಾಯಲ್ ಎನ್‌ಫೀಲ್ಡ್, ಡ್ಯೂಕ್ ಬೈಕ್‌ಗಳನ್ನು ಕಳ್ಳತನ ಮಾಡುತ್ತಿದ್ದರು. ಪ್ರತಿಯೊಂದು ಬೈಕ್ ಸುಮಾರು 1 ರಿಂದ 2 ಲಕ್ಷ ರೂ. ಬೆಲೆ ಬಾಳುವಂತಹ ಬೈಕ್‌ಗಳೇ ಆಗಿದ್ದವು.
ಇವರಿಬ್ಬರು ಸೇರಿಕೊಂಡು ಯಾದಗಿರಿ, ವಿಜಯಪುರ ಹಾಗೂ ರಾಯಚೂರು ಜಿಲ್ಲೆಯ ನಾನಾ ಠಾಣಾ ವ್ಯಾಪ್ತಿಯಲ್ಲಿ ಸುಮಾರು 20 ಬೈಕ್‌ಗಳು ಹಾಗೂ ಒಂದು ಕಾರು ಸಹ ಕಳ್ಳತನ ಮಾಡಿರುವುದಾಗಿ ವಿಚಾರಣೆ ವೇಳೆ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾರೆ. ಇವರಿಬ್ಬರೂ ಸಾಮಾನ್ಯ ಬೈಕ್‌ಗಳನ್ನು ಕದಿಯುತ್ತಿರಲಿಲ್ಲ. ಬದಲಿಗೆ ಐಷಾರಾಮಿ ಬೈಕ್‌ಗಳು, ಹೆಚ್ಚಿನ ಬೆಲೆಯ ಬೈಕ್‌ಗಳನ್ನು ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದರು. ವಿಶೇಷವಾಗಿ ರಾಯಲ್ ಎನ್‌ಫೀಲ್ಡ್ , ಡ್ಯೂಕ್ ಬೈಕ್‌ಗಳನ್ನು ಕಳ್ಳತನ ಮಾಡುತ್ತಿದ್ದರು. ಪ್ರತಿಯೊಂದು ಬೈಕ್ ಸುಮಾರು 1 ರಿಂದ 2 ಲಕ್ಷ ರೂ. ಬೆಲೆ ಬಾಳುವಂತಹ ಬೈಕ್‌ಗಳೇ ಆಗಿದ್ದವು.