ದೆಹಲಿ: 55 ವರ್ಷದ ಮಹಿಳೆಯನ್ನು ಆಕೆಯ ಮಗಳ ಮಾಜಿ ಗೆಳೆಯ ಗುಂಡಿಕ್ಕಿ ಕೊಂದಿರುವ ಘಟನೆ ಉತ್ತರ ದೆಹಲಿಯ ಸರಾಯ್ ರೋಹಿಲ್ಲಾ ಪ್ರದೇಶದಲ್ಲಿ ಬುಧವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆಯ ಕುರಿತು ಪೊಲೀಸರಿಗೆ ಅಂದು ಸಂಜೆ 4 ಗಂಟೆಗೆ ಮಾಹಿತಿ ನೀಡಲಾಗಿದ್ದು. ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಗುಂಡಿಕ್ಕಿ ಕೊಂದಿರುವ ಬಗ್ಗೆ ಪತ್ತೆಯಾಗಿದೆ ಎಂದು ಉಪ ಪೊಲೀಸ್ ಆಯುಕ್ತ (ಉತ್ತರ) ಸಾಗರ್ ಸಿಂಗ್ ಕಲ್ಸಿ ತಿಳಿಸಿದ್ದಾರೆ. ಸಾವನ್ನಪಿರುವ ಮಹಿಳೆಯನ್ನು ಪೂನಂ ಎಂದು ಗುರುತಿಸಲಾಗಿದೆ, ಪೂನಂ ಅವರ ಮಗಳ ಮಾಜಿ ಗೆಳೆಯ ಅಂಕಿತ್ ಕೌಶಿಕ್ ಕೊಂದಿರುವ ಬಗ್ಗೆ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.
ಈ ಘಟನೆ ಕುರಿತು ತನಿಖೆ ನಡೆಸಲಾಗುತ್ತಿದೆ. ಪೂನಂ ಅವರ ಮೃತ ದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಇದೀಗ ಅವರ ದೇಹವನ್ನು ಮನೆಯವರಿಗೆ ಹಸ್ತಾಂತರಿಸಲಾಗುವುದು ಎಂದು ತಿಳಿಸಿದ್ದಾರೆ. ಅಂಕಿತ್ ಕೌಶಿಕ್ ಎಂಬ ಯುವಕನನ್ನು ಹುಡುಕಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನೂ ಪೊಲೀಸರ ಪ್ರಾಥಮಿಕ ಮಾಹಿತಿ ಪ್ರಕಾರ ಪೂನಂ ಅವರು ಮಗಳು ಮತ್ತು ಅಂಕಿತ್ ಕೌಶಿಕ್ ಪ್ರೀತಿಸುತ್ತಿದ್ದು, ನಂತರ ಇಬ್ಬರು ದೂರವಾಗಿದ್ದಾರೆ, ನೀನು ನೀಡಿದ ಗಿಫ್ಟ್ನ್ನು ತೆಗೆದುಕೊಂಡು ಹೋಗುವಂತೆ ಅಂಕಿತ್ ಕೌಶಿಕ್ಗೆ ಪೂನಂ ಅವರ ಮಗಳು ತಿಳಿಸಿದ್ದಾಳೆ. ಅಂಕಿತ್ ಕೌಶಿಕ್ ಪೂನಂ ಅವರ ಮನೆಗೆ ಬಂದಾಗ ನಿನ್ನ ಗಿಫ್ಟ್ ತೆಗೆದುಕೊಂಡು ಹೋಗು ಎಂದು ಅವಾಜ್ ಹಾಕಿದ್ದಾಳೆ, ಇಬ್ಬರ ನಡುವೆ ಮಾತು ಚಕಮಕಿ ನಡೆದಿದೆ, ಇದರಿಂದ ಕೋಪಗೊಂಡ ಅಂಕಿತ್ ಕೌಶಿಕ್ ಪಿಸ್ತೂಲ್ ತೆಗೆದು ಗುಂಡು ಹಾರಿಸಲು ಮುಂದಾಗಿದ್ದಾನೆ.
ಈ ಸಮಯದಲ್ಲಿ ಆಕೆಯ ತಾಯಿ ಪೂನಂ ಕೂಡ ಪಕ್ಕದಲ್ಲಿ ನಿಂತಿದ್ದರು, ಇಬ್ಬರ ಜಗಳದ ನಡುವೆ ತಾಯಿ ಮಧ್ಯೆ ಬಂದು ಜಗಳ ನಿಲ್ಲಿಸಲು ಮುಂದಾಗಿದ್ದಾರೆ. ಆದರೆ ಅಂಕಿತ್ ಕೌಶಿಕ್, ಪೂನಂ ತಲೆಗೆ ಗುಂಡು ಹಾರಿಸಿದ್ದಾನೆ. ನಂತರ ಆತ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಂಡ ರಚನೆ ಮಾಡಲಾಗಿದೆ, ಖಂಡಿತ ಆತನನ್ನು ಪತ್ತೆ ಮಾಡುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.