ಯಲ್ಲಾಪುರ: ಸರ್ಕಾರದ ಅಧೀನದಲ್ಲಿ ಬರುವ ತಾಲೂಕಿಗೆ ಸಂಬಧಿಸಿದ ಪರಿಶಿಷ್ಟ ಜಾತಿ ಮೀಸಲಿರುವ ವಿವಿಧ ಅನುದಾನದ ಕಾಮಗಾರಿಗಳನ್ನು ನಮ್ಮ ಸಂಘದ ಗುತ್ತಿಗೆದಾರರಿಗೆ ನೀಡುವಂತೆ ತಾಲೂಕಾ ಪರಿಶಿಷ್ಟ ಜಾತಿ ಸಿವಿಲ್ ಗುತ್ತಿಗೆದಾರ ಸಂಘ ಆಗ್ರಹಿಸಿದೆ.
ಈ ಕುರಿತು ಮಂಗಳವಾರ ಸಚಿವ ಶಿವರಾಮ ಹೆಬ್ಬಾರ ಅವರಿಗೆ ಸಂಘದ ಮುಖಂಡರು ಮನವಿ ಸಲ್ಲಿಸಿದರು.
ಮನವಿಯಲ್ಲಿ ಸಂಘದ ಮೂಲಕವೇ ಕಾಮಗಾರಿ ಕೈಗೊಳ್ಳುವಂತೆ ಮಾಡಿದರೆ ಸಂಘಕ್ಕೂ, ಗುತ್ತಿಗೆದಾರರಿಗೂ ನೆರವಾದಂತೆ ಆಗುತ್ತದೆ. ಕಾರಣ ಪರಿಶಿಷ್ಟ ಜಾತಿಯ ಅನುದಾನದ ಕಾಮಗಾರಿಗಳನ್ನು ಪರಿಶಿಷ್ಟ ಜಾತಿಯ ಸಿವಿಲ್ ಗುತ್ತಿಗೆದಾರರಿಗೇ ನೀಡಬೇಕೆಂದು ಒತ್ತಾಯಿಸಿದರು.
ಸಂಘದ ಗೌರವಾಧ್ಯಕ್ಷ ನಿರಂಜನ ಪಾಟಣಕರ್, ತಾಲೂಕಾ ಅಧ್ಯಕ್ಷ ನಾಗೇಶ ಬೊವಿವಡ್ಡರ್, ಉಪಾಧ್ಯಕ್ಷ ಪರಶುರಾಮ ಮದನೂರು ಮುಂತಾದವರು ಇದ್ದರು.