‘ಉಪ್ಪೇನಾ’ ಸಿನಿಮಾದ ಸುಂದರಿ ಕೃತಿ ಶೆಟ್ಟಿ ಅವರು ಮೂಲತಃ ಮಂಗಳೂರಿನವರು. ತುಳುನಾಡಿನ ಈ ಬೆಡಗಿ ಕೃತಿ ಟಾಲಿವುಡ್ ಅಂಗಳದಲ್ಲಿ ಸಾಲು ಸಾಲು ಸಿನಿಮಾಗಳ ಮೂಲಕ ಸಂಚಲನ ಮೂಡಿಸುತ್ತಿದ್ದಾರೆ. ಹೀಗಿರುವಾಗ ಈಗ ವಿಷ್ಯವಾಗಿ ಕೃತಿ ಶೆಟ್ಟಿ ಸುದ್ದಿಯಲ್ಲಿದ್ದಾರೆ. ನಟಿಗೆ ಸ್ಟಾರ್ ನಟನ ಮಗನೊಬ್ಬ ಕಿರುಕುಳ ಕೊಡ್ತಿದ್ದಾನೆ ಎಂದು ಸುದ್ದಿ ವೈರಲ್ ಆಗಿದೆ. ಇದರಿಂದ ಕೃತಿಗೆ ಆ ನಟನಿಂದ ಸಂಕಷ್ಟ ಎದುರಾಗಿದೆಯಂತೆ.
ತೆಲುಗಿನ ‘ಉಪ್ಪೇನಾ’ ಸಿನಿಮಾದ ಸಕ್ಸಸ್‌ನಿಂದ ರಾತ್ರೋ ರಾತ್ರಿ ಸ್ಟಾರ್ ಆದ ಯುವನಟಿ ಕೃತಿ ಶೆಟ್ಟಿ ಅವರು ಸಾಕಷ್ಟು ಸ್ಟಾರ್ ನಟರ ಸಿನಿಮಾ ಅವಕಾಶಗಳನ್ನ ಬಾಚಿಕೊಂಡರು. ಆದರೆ ಹೇಳಿಕೊಳ್ಳುವಂತಹ ಬಿಗ್ ಬ್ರೇಕ್ ಸಿಗಲಿಲ್ಲ. ಇತ್ತೀಚಿಗೆ ನಾಗಚೈತನ್ಯ ಜೊತೆ ‘ಕಸ್ಟಡಿ’ ಎಂಬ ಸಿನಿಮಾದಲ್ಲಿ ನಟಿಸಿದ್ದರು. ಈ ಚಿತ್ರ ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗಿತ್ತು.
ಈಗ ಮುಂಚಿನ ಹಾಗೇ ಕೃತಿಗೆ ಹೇಳಿಕೊಳ್ಳುವಂತಹ ಚಾನ್ಸ್ ಸಿಗುತ್ತಿಲ್ಲ. ನಿಧಾನಕ್ಕೆ ಕಾಲಿವುಡ್ ಚಿತ್ರಗಳತ್ತ ನಟಿ ಮುಖ ಮಾಡಿದ್ದಾರೆ ಎನ್ನಲಾಗುತ್ತಿದೆ. ಅದರಲ್ಲೂ ಕನ್ನಡದ ಬ್ಯೂಟಿ ಶ್ರೀಲೀಲಾ ಎಂಟ್ರಿಯಿಂದ ಕೃತಿಗೂ ಎಫೆಕ್ಟ್ ಆಗಿದೆ. ಶ್ರೀಲೀಲಾ ಸ್ಟಾರ್‌ಡಂನಿಂದ ಕೃತಿ ಶೆಟ್ಟಿಗೆ ಅವಕಾಶ ಕಮ್ಮಿಯಾಗ್ತಿದೆ. ಕೃತಿಗೆ ಸಿನಿಮಾರಂಗದಲ್ಲಿ ಡಿಮ್ಯಾಂಡ್ ಕಮ್ಮಿಯಾಗಿರುವ ಬೆನ್ನಲ್ಲೇ ಸ್ಟಾರ್ ನಟನ ಪುತ್ರನಿಂದ ಕಿರುಕುಳ ಶುರುವಾಗಿದೆ ಎಂಬ ಸುದ್ದಿ ಟಿಟೌನ್ ಅಡ್ಡಾದಲ್ಲಿ ಗಿರಿಕಿ ಹೊಡೆಯುತ್ತಿದೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ಸ್ವತಃ ಕೃತಿ ಹಂಚಿಕೊಂಡಿದ್ದಾರೆ ಎನ್ನಲಾಗ್ತಿದೆ.