ಯಲ್ಲಾಪುರ; ಪಟ್ಟಣದ ಎಪಿಎಂಸಿ ಆಧಾರದಲ್ಲಿರುವ ಸಸ್ಯೋದ್ಯಾನದಲ್ಲಿ ಭಾನುವಾರ ಯಲ್ಲಾಪುರ ಅರಣ್ಯ ವಿಭಾಗ ಮಟ್ಟದ ವನಮಹೋತ್ಸವ ಕಾರ್ಯಕ್ರಮಕ್ಕೆ
ಶಾಸಕ ಶಿವರಾಮ ಹೆಬ್ಬಾರ ಸಸಿ ನೆಡುವ ಮೂಲಕ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು,”ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಪರಿಸರದ ಬಗ್ಗೆ ಸಾರ್ವಜನಿಕರಲ್ಲಿ ಇನ್ನಷ್ಟು ಜಾಗೃತಿ ಮೂಡಿಸುವ ಮೂಲಕ ಹಸಿರಿನ ಪ್ರೀತಿ ಹೆಚ್ಚಿಸಬೇಕು ಎಂದರು. ಇದೇ ವೇಳೆ ಸಾರ್ವಜನಿಕರಿಗೆ ಸಸಿಗಳನ್ನು ವಿತರಿಸಲಾಯಿತು.
ಎಂ ಎಲ್ ಸಿ ಶಾಂತರಾಮ ಸಿದ್ದಿ, ಕೆನರಾ ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಕೆ. ವಿ. ವಸಂತ ರೆಡ್ಡಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್. ಜಿ .ಹೆಗಡೆ, ಎಸಿಎಫ್ ಹಿಮವತಿ ಭಟ್ಟ ಇದ್ದರು.
ಅರಣ್ಯ ರಕ್ಷಣೆಯ ವೇಳೆ ಬೆಂಕಿಗಾಹುತಿಯಾದ ಕಾವುಲುಗಾರ ವಜ್ರಳ್ಳಿಯ ಜೂಜೆ ಸಿದ್ದಿ ಕುಟುಂಬಸ್ಥರಿಗೆ ಕೆನರಾ ವೃತ್ತದ ಅಧಿಕಾರಿ, ಸಿಬ್ಬಂದಿಯಿಂದ ಸಂಗ್ರಹಿಸಿದ 6 ಲಕ್ಷ ರೂ ಪರಿಹಾರವನ್ನು ಶಾಸಕರು ವಿತರಿಸಿದರು.