ಹೆದ್ದಾರಿ ವಿಸ್ತರಣೆಗೆ ದೇವಸ್ಥಾನ, ದರ್ಗಾ ಕಟ್ಟಡಗಳ ತೆರವು

ನವದೆಹಲಿ: ಹೆದ್ದಾರಿ ವಿಸ್ತರಣೆಗಾಗಿ ಭಾರೀ ಪೊಲೀಸ್ ಬಿಗಿ ಭದ್ರತೆಯಲ್ಲಿ ಭಜನ್‍ಪುರ ಚೌಕ್‍ನಲ್ಲಿದ್ದ ಹನುಮಾನ್ ದೇವಸ್ಥಾನ ಮತ್ತು ದರ್ಗಾವನ್ನು ನೆಲಸಮಗೊಳಿಸಲಾಗಿದೆ. ತೆರವು ಕಾರ್ಯಾಚರಣೆಯ ವೇಳೆ ಭಾರೀ ಸಂಖ್ಯೆಯ ಪೊಲೀಸರು ಮತ್ತು ಸಿಆರ್‌ಪಿಎಫ್‌ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ಕಟ್ಟಡವನ್ನು ನೆಲಸಮಗೊಳಿಸುವ ಮೊದಲು ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ಬಳಿಕ ದೇವಸ್ಥಾನದೊಳಗಿದ್ದ ದೇವತೆಗಳ ಪ್ರತಿಮೆಗಳನ್ನು ತೆರವು ಮಾಡಿ, ಸುರಕ್ಷಿತ ಸೌಲಭ್ಯದಲ್ಲಿ ಇರಿಸಲಾಯಿತು.

ಸಹರಾನ್‍ಪುರ ಹೆದ್ದಾರಿಗಾಗಿ ರಸ್ತೆಯನ್ನು ವಿಸ್ತರಿಸಲು ದೆಹಲಿಯ ಧಾರ್ಮಿಕ ಸಮಿತಿಯು ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸುವ ನಿರ್ಧಾರ ತೆಗೆದುಕೊಂಡಿತ್ತು. ಅದರಂತೆ ಹನುಮಾನ್ ದೇವಾಲಯ ಮತ್ತು ಮಜರ್ ತೆರವು ಮಾಡಿದೆ ಎಂದು ಈಶಾನ್ಯ ವಿಭಾಗದ ಡಿಸಿಪಿ ಜಾಯ್ ಎನ್ ಟಿರ್ಕೆ ಹೇಳಿದ್ದಾರೆ.

ದೇವಸ್ಥಾನ ಮತ್ತು ದರ್ಗಾ ತೆರವಿಗೆ ಸಚವೆ ಅತಿಶಿ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಲೆಫ್ಟಿನೆಂಟ್ ಗವರ್ನರ್ ವಿ.ಕೆ ಸಕ್ಸೇನಾ ಅವರಿಗೆ ದೇವಸ್ಥಾನ ತೆರವು ನಿಲ್ಲಿಸುವಂತೆ ಮನವಿ ಮಾಡಿದರು.