ಮಹಾರಾಷ್ಟ್ರದಲ್ಲಿ ಶೀಘ್ರವೇ ಸಚಿವ ಸಂಪುಟ ವಿಸ್ತರಣೆ, ತಡರಾತ್ರಿ ಶಿಂದೆ, ಫಡ್ನವಿಸ್ ನಡುವೆ ಮಹತ್ವದ ಚರ್ಚೆ

ಶೀಘ್ರದಲ್ಲಿ ಮಹಾರಾಷ್ಟ್ರದಲ್ಲಿ ಸಚಿವ ಸಂಪುಟ ವಿಸ್ತರಣೆಯಾಗುವ ಸಾಧ್ಯತೆ ಇದೆ. ಮುಖ್ಯಮಂತ್ರಿ Eknath Shinde ಮತ್ತು ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಇಂದು ಪಕ್ಷದ ಪ್ರಮುಖ ಶಾಸಕರು ಮತ್ತು ಸಚಿವರ ಸಭೆ ಕರೆದಿದ್ದಾರೆ. ಮೂಲಗಳ ಪ್ರಕಾರ ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಸಭೆ ಕರೆಯಲಾಗಿದೆ. ಇದಕ್ಕೂ ಮುನ್ನ ತಡರಾತ್ರಿಯವರೆಗೂ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಮಹತ್ವದ ಸಭೆ ನಡೆಸಿದ್ದಾರೆ.

ಮೂಲಗಳ ಪ್ರಕಾರ ಸಚಿವ ಸಂಪುಟ ವಿಸ್ತರಣೆ ವಿಳಂಬಕ್ಕೆ ಎರಡೂ ಪಕ್ಷಗಳ ಶಾಸಕರಲ್ಲಿ ಅಸಮಾಧಾನವಿದೆ. ಕಳೆದ ವರ್ಷ ಮೊದಲ ಸಚಿವ ಸಂಪುಟ ರಚನೆಯಾದ ನಂತರ ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆಯೇ ಆಗಿಲ್ಲ. ಸದ್ಯ ಬಿಜೆಪಿ ಮತ್ತು ಶಿವಸೇನೆ ಸಂಪುಟದಲ್ಲಿ 9-9 ಸಚಿವರಿದ್ದಾರೆ.

ಜೂನ್ 2022 ರಲ್ಲಿ ಶಿವಸೇನೆ (ಶಿಂದೆ ಬಣ) ಮತ್ತು ಬಿಜೆಪಿ ಒಟ್ಟಾಗಿ ಸರ್ಕಾರವನ್ನು ರಚಿಸಿದವು. ಆ ವೇಳೆ ಸಿಎಂ ಏಕನಾಥ್ ಶಿಂದಎ ಮತ್ತು ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮಾತ್ರ ಪ್ರಮಾಣ ವಚನ ಸ್ವೀಕರಿಸಿದರು. ಇದರ ನಂತರ, ಶಿಂಧೆ ಸಂಪುಟದ ಮೊದಲ ವಿಸ್ತರಣೆಯು ಆಗಸ್ಟ್ 9, 2022 ರಂದು ನಡೆಯಿತು ಮತ್ತು 18 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇದರಲ್ಲಿ ಶಿವಸೇನೆಯ ಶಿಂಧೆ ಪಾಳಯ ಮತ್ತು ಬಿಜೆಪಿಯ 9-9 ಶಾಸಕರು ಸೇರಿದ್ದಾರೆ.

ಇದಕ್ಕೂ ಮುನ್ನ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಮತ್ತು ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಅವರು ಶುಕ್ರವಾರ (ಜೂನ್ 30) ರಾಜ್ಯ ಸಚಿವ ಸಂಪುಟವನ್ನು ಜುಲೈನಲ್ಲಿ ವಿಸ್ತರಿಸಬಹುದು ಎಂದು ಹೇಳಿದ್ದರು.

ಇದೇ ಮೊದಲ ಬಾರಿಗೆ ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಬಿಜೆಪಿ ನಾಯಕರು ಕಾಲಮಿತಿಯನ್ನು ತಿಳಿಸಿದ್ದರು. ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮುಖ್ಯಮಂತ್ರಿ ನಿರ್ಧರಿಸುತ್ತಾರೆ. ಜುಲೈನಲ್ಲಿ ಅದು ನಡೆಯಲಿದೆ ಎಂದು ಫಡ್ನವೀಸ್ ಹೇಳಿದ್ದರು.

ಮಹಾರಾಷ್ಟ್ರದ ನಿಯಮದ ಪ್ರಕಾರ 43 ಮಂತ್ರಿಗಳನ್ನು ಮಾಡಬಹುದು. ಇದರಲ್ಲಿ ಸಿಎಂ, ಉಪ ಮುಖ್ಯಮಂತ್ರಿ ಸೇರಿ ಒಟ್ಟು 20 ಮಂದಿ ಸಂಪುಟದಲ್ಲಿದ್ದಾರೆ. ಇನ್ನೂ 23 ಸಚಿವರಿಗೆ ಜಾಗವಿದೆ ಎನ್ನಲಾಗಿದೆ.