ಮೈಸೂರು: ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ದಲ್ಲಿ ವಿದ್ಯುತ್ ಆನೆ ಯೊಂದು ಸಾವನ್ನಪ್ಪಿದ್ದು, ಹಳೇ ಮೈಸೂರು ಮಾನಂದವಾಡಿ ರಸ್ತೆಯ ಪಕ್ಕದಲ್ಲಿ ಈ ದುರಂತ ಸಂಭವಿಸಿದೆ. 30 ರಿಂದ 35 ವರ್ಷದ ಗಂಡಾನೆ ಇದಾಗಿದ್ದು, ಉದಯ ಎಂಬುವವರಿಗೆ ಸೇರಿದ ಜಮೀನಿಗೆ ಅಳವಡಿಸಿದ್ದ ಸೋಲಾರ್ ತಂತಿಗೆ ಸ್ಪರ್ಶಿಸಿ ಈ ಘಟನೆ ನಡೆದಿದೆ. ನಂತರ ಜಮೀನು ಮಾಲೀಕ ಉದಯ ಪರಾರಿಯಾಗಿದ್ದ, 1972ರ ವನ್ಯಜೀವಿ ಸಂರಕ್ಷಣಾ ಕಾಯಿದೆ ಸೆಕ್ಷನ್ 9 ಮತ್ತು 22 ರ ಪ್ರಕಾರ ಅಂತರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.