ವ್ಯವಹಾರದಲ್ಲಿ ನಷ್ಟ ಅನುಭವಿಸಿದ್ದ ಉದ್ಯಮಿಯೊಬ್ಬರು ಸ್ನೇಹಿತನೊಬ್ಬನನ್ನು ಕೊಂದು ತಾನೇ ಸತ್ತಿದ್ದೇನೆಂದು ಬಿಂಬಿಸಿ 4 ಕೋಟಿ ರೂ. ಇನ್ಶೂರೆನ್ಸ್ ಪಡೆಯಲು ಯತ್ನಿಸಿರುವ ಘಟನೆ ಪಂಜಾಬ್ನಲ್ಲಿ ನಡೆದಿದೆ. ರಾಮದಾಸ್ ನಗರ ಪ್ರದೇಶದ ಗುರ್‌ಪ್ರೀತ್ ಸಿಂಗ್, ಅವರ ಪತ್ನಿ ಖುಷ್‌ದೀಪ್ ಕೌರ್ ಮತ್ತು ಇತರ ನಾಲ್ವರನ್ನು ಸುಖಜೀತ್ ಸಿಂಗ್ ಹತ್ಯೆ ಮಾಡಿರುವ ಆರೋಪದಲ್ಲಿ ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ರಾವ್‌ಜೋತ್ ಕೌರ್ ಗ್ರೆವಾಲ್ ತಿಳಿಸಿದ್ದಾರೆ.
ಸುಖ್‌ಜೀತ್‌ನ ಪತ್ನಿ ಜೀವನ್‌ದೀಪ್ ಕೌರ್ ಅವರು ನಾಪತ್ತೆಯಾಗಿರುವ ಬಗ್ಗೆ ದೂರು ನೀಡಿದ ನಂತರ ಈ ವಿಷಯ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗುರ್‌ಪ್ರೀತ್ ತನ್ನ ವ್ಯವಹಾರದಲ್ಲಿ ನಷ್ಟವನ್ನು ಅನುಭವಿಸಿದ್ದರು ಮತ್ತು 4 ಕೋಟಿ ಮೌಲ್ಯದ ವಿಮೆಯ ಹಣವನ್ನು ಪಡೆಯಲು ತನ್ನ ಹೆಂಡತಿ ಮತ್ತು ಇತರ ನಾಲ್ವರು ಸುಖ್ವಿಂದರ್ ಸಿಂಗ್, ಜಸ್ಪಾಲ್ ಸಿಂಗ್, ದಿನೇಶ್ ಕುಮಾರ್ ಮತ್ತು ರಾಜೇಶ್ ಕುಮಾರ್ ಜೊತೆ ಸೇರಿ ತಾನೇ ಸತ್ತಿದ್ದೇನೆನ್ನುವಂತೆ ಬಿಂಬಿಸಿದ್ದ ಎನ್ನುವ ಮಾಹಿತಿ ಲಭ್ಯವಾಗಿದೆ.
ಗುರ್‌ಪ್ರೀತ್ ತನ್ನ ವ್ಯವಹಾರದಲ್ಲಿ ನಷ್ಟವನ್ನು ಅನುಭವಿಸಿದ್ದನು ಮತ್ತು 4 ಕೋಟಿ ಮೌಲ್ಯದ ವಿಮಾ ಹಣವನ್ನು ಪಡೆಯಲು ತನ್ನ ಹೆಂಡತಿ ಮತ್ತು ಇತರ ನಾಲ್ವರು ಸುಖ್ವಿಂದರ್ ಸಿಂಗ್ ಸಂಘ, ಜಸ್ಪಾಲ್ ಸಿಂಗ್, ದಿನೇಶ್ ಕುಮಾರ್ ಮತ್ತು ರಾಜೇಶ್ ಕುಮಾರ್ ಜೊತೆ ಸೇರಿ ತನ್ನ ಸಾವನ್ನು ನಕಲಿ ಮಾಡಲು ಸಂಚು ರೂಪಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಇದು ಅನುಮಾನಕ್ಕೆ ಎಡೆಮಾಡಿಕೊಟ್ಟಿದ್ದು, ಗುರ್ ಪ್ರೀತ್ ಕುಟುಂಬದವರನ್ನು ಮತ್ತೆ ವಿಚಾರಣೆ ನಡೆಸಲಾಗಿದೆ. ಆಗ ಗುರ್‌ಪ್ರೀತ್ ಬದುಕಿರುವುದು ಪತ್ತೆಯಾಗಿದ್ದು, 4 ಕೋಟಿ ರೂಪಾಯಿ ಮೌಲ್ಯದ ವಿಮೆ ಹಣ ಪಡೆಯಲು ತನ್ನ ಪತ್ನಿ ಮತ್ತು ಇತರರೊಂದಿಗೆ ಸೇರಿ ಸಾವಿನ ನಾಟಕವಾಡಿರುವುದು ಬೆಳಕಿಗೆ ಬಂದಿದೆ.
ತನಿಖೆಯ ವೇಳೆ ಗುರುಪ್ರೀತ್‌ನ ಕುಟುಂಬವು ರಾಜ್‌ಪುರ ಪೊಲೀಸ್ ಠಾಣೆಯಲ್ಲಿ ಜೂನ್ 20 ರಂದು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ ಎಂದು ದೂರು ನೀಡಿರುವುದು ಕಂಡುಬಂದಿದೆ. ಜೂನ್ 19ರಂದು ಗುರುಪ್ರೀತ್ ಸುಖಜೀತ್ಗೆ ಹೆಚ್ಚು ಮದ್ಯಪಾನ ಮಾಡಿಸಿ, ಪ್ರಜ್ಞೆ ತಪ್ಪಿಸಿದ್ದರು.
ಗುರುಪ್ರೀತ್ ತನ್ನ ಬಟ್ಟೆ ಬದಲಿಸಿ ಆತನಿಗೆ ತೊಡಿಸಿ, ಆತನ ಮುಖದ ಮೇಲೆ ಟ್ರಕ್ ಓಡಿಸಿ ಹತ್ಯೆ ಮಾಡಿದ್ದ, ಮುಖದ ಗುರುತು ಸಿಗದಂತೆ ಮಾಡಿದ್ದ ಎನ್ನಲಾಗಿದೆ. ಗುರ್‌ಪ್ರೀತ್‌ನ ಪತ್ನಿ ಸುಖಜೀತ್‌ನ ಛಿದ್ರಗೊಂಡ ದೇಹವನ್ನು ತನ್ನ ಗಂಡನದೇ ಎಂದು ಹೇಳಿದ್ದರು.