ಸಾರ್ವಜನಿಕರಿಗೆ ರಿಯಾಯಿತಿ ದರದಲ್ಲಿ ಗಿಡಗಳನ್ನು ನೀಡುವ ದೃಷ್ಟಿಯಿಂದ ಯಲ್ಲಾಪುರದ ಬೆಲ್ ರಸ್ತೆಯ ಪಕ್ಕ ಅರಣ್ಯ ಇಲಾಖೆಯ ಅಡಿಯಲ್ಲಿ ಸಸ್ಯ ಸಂತೆ ಭಾನುವಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಡಿಸಿಎಫ್ ಎಸ್.ಜಿ.ಹೆಗಡೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಸಾರ್ವಜನಿಕರು ಅಪೇಕ್ಷಿಸಿದ ಗಿಡಗಳನ್ನು ರಿಯಾಯಿತಿ ದರದಲ್ಲಿ ನೀಡುವ ಈ ಯೋಜನೆಯನ್ನು ಇಲಾಖೆ ಜಾರಿಗೆ ತಂದಿದ್ದು, ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆಯಬೇಕು. ಹೆಚ್ಚು ಹೆಚ್ಚು ಗಿಡಗಳನ್ನು ನೆಡಬೇಕು ಎಂದು ಕರೆ ಕೊಟ್ರು.. ಈ ವೇಳೆ ಆರ್.ಎಫ್.ಒ ಎಲ್.ಎ ಮಠ, ಡಿಆರ್.ಎಫ್.ಒಗಳಾದ ಸಂಜಯಕುಮಾರ, ಅಲ್ತಾಫ ಚೌಕಡಾಕ ಉಪಸ್ಥಿತರಿದ್ರು…
ಶ್ರೀಧರ್ ಅನಲಗಾರ್, ನುಡಿ ಸಿರಿ ನ್ಯೂಸ್, ಯಲ್ಲಾಪುರ