ದಕ್ಷಿಣ ಕೊರಿಯಾದ ಮಹಿಳೆಯೊಬ್ಬಳು ತನ್ನ ಮಕ್ಕಳನ್ನು ಕೊಂದು ಶವವನ್ನು ವರ್ಷಗಳ ಕಾಲ ಫ್ರೀಜರ್ನಲ್ಲಿ ಇರಿಸಿರುವ ಘಟನೆ ಬೆಳಕಿಗೆ ಬಂದಿದೆ. 30 ವರ್ಷದ ಮಹಿಳೆಯು ಮಕ್ಕಳು ಹುಟ್ಟಿ ಒಂದು ದಿನದ ಬಳಿಕ ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ. 12,10 ಹಾಗೂ 8 ವರ್ಷದ ಮೂರು ಮಕ್ಕಳು ಆಕೆಗೆ ಈಗಾಗಲೇ ಇದ್ದು, ಅವರನ್ನು ನೋಡಿಕೊಳ್ಳುವಲ್ಲಿ ಆರ್ಥಿಕ ತೊಂದರೆಗಳು ಎದುರಾಗುತ್ತಿದ್ದು, ಇನ್ನೂ ಇಬ್ಬರು ಮಕ್ಕಳನ್ನು ಸಾಕುವುದು ಹೇಗೆ ಎಂದು ಆಲೋಚನೆ ಮಾಡಿ ಶಿಶುಗಳನ್ನು ಹತ್ಯೆ ಮಾಡಿರುವುದಾಗಿ ತಿಳಿಸಿದ್ದಾರೆ.
ಮಹಿಳೆಯು ನವೆಂಬರ್ 2018ರಲ್ಲಿ ನಾಲ್ಕನೇ ಮಗುವನ್ನು ಹತ್ಯೆ ಮಾಡಿದ್ದಳು. ಹೆರಿಗೆಯಾದ ಮರುದಿನ ಹೆಣ್ಣು ಮಗುವನ್ನು ಕತ್ತು ಹಿಸುಕಿ ಮಗುವಿನ ಶವವನ್ನು ತನ್ನ ಮನೆಯ ಫ್ರೀಜರ್ನಲ್ಲಿರಿಸಿದ್ದಳು. 2019ರಲ್ಲಿ ಜನಿಸಿದ ತನ್ನ ಐದನೇ ಮಗುವಿಗೆ ಅದೇ ರೀತಿ ಮಾಡಿದ್ದಾಳೆ ಎನ್ನಲಾಗಿದೆ.
ಗರ್ಭಪಾತ ಮಾಡಲಾಗಿದೆ ಎಂದು ಆಕೆಯ ಪತಿ ಎಲ್ಲರಿಗೂ ಹೇಳಿದ್ದ, ಆದರೆ ಮೇ ತಿಂಗಳಲ್ಲಿ ಶಿಶುಗಳ ಜನನದ ಗಣತಿ ನಡೆಸಿದಾಗ ಆಸ್ಪತ್ರೆಯಲ್ಲಿ ಮಗು ಹುಟ್ಟಿದೆ ಆದರೆ ಸಾವನ್ನಪ್ಪಿರುವುದು ಹೇಗೆ ಎನ್ನುವ ವಿಚಾರ ಕುರಿತು ತನಿಖೆ ಆರಂಭವಾಯಿತು.
ಆಗ ಮಹಿಳೆಯ ಮನೆಯಲ್ಲಿ ತಪಾಸಣೆ ನಡೆಸಿದಾಗ ಶಿಶುಗಳ ಶವ ಪತ್ತೆಯಾಗಿದೆ. ಮಹಿಳೆ ಮನೆಯಲ್ಲಿ ಒಂದು ಮಗುವನ್ನು ಮತ್ತು ಆಸ್ಪತ್ರೆಯ ಬಳಿ ಮತ್ತೊಂದು ಮಗುವನ್ನು ಕೊಂದಿದ್ದಾಳೆ.
ದಕ್ಷಿಣ ಕೊರಿಯಾದ ಆಡಿಟ್ ಮತ್ತು ತಪಾಸಣೆ ಮಂಡಳಿಯು 2015 ಮತ್ತು 2022 ರ ನಡುವೆ ಜನಿಸಿದ ಸುಮಾರು 2,236 ಶಿಶುಗಳನ್ನು ಅವರ ಪೋಷಕರು ನೋಂದಾಯಿಸಿಲ್ಲ ಎಂಬುದು ಬೆಳಕಿಗೆ ಬಂದಿತ್ತು.