ಇಸ್ಲಾಮಾಬಾದ್: ಇಸ್ಲಾಮಿಕ್ ವಿಚಾರಗಳನ್ನು ಹಾಗೂ ಆಚರಣೆಗಳನ್ನು ಉಳಿಸಿಕೊಳ್ಳಲು, ಪಾಕಿಸ್ತಾನ್ ವಿಶ್ವವಿದ್ಯಾನಿಲಯಗಳಲ್ಲಿ ಹೋಳಿ ಮತ್ತು ಇತರ ಹಬ್ಬಗಳನ್ನು ನಿಷೇಧಿಸಿದೆ. ಭಾರತದ ವಿಭಜನೆಯ ನಂತರ ಸೃಷ್ಟಿಯಾದ ಪಾಕಿಸ್ತಾನದಲ್ಲಿ ಇಸ್ಲಾಮಿಕ್ ನಿಯಮಗಳು ಮತ್ತು ನಿಬಂಧನೆಗಳಿಂದಾಗಿ ಇತರ ಧರ್ಮದ ಜನರು ಶಾಂತಿಯುತವಾಗಿ ಬದುಕುವುದು ಕಷ್ಟಕರವಾಗಿದೆ. ಅಲ್ಲಿ ಮುಸ್ಲಿಮರಿಗೆ ಹೋಲಿಸಿದರೆ ಹಿಂದೂಗಳು, ಬೌದ್ಧರು ಮತ್ತು ಕ್ರಿಶ್ಚಿಯನ್ನರ ಹಕ್ಕುಗಳು ಕಡಿಮೆಯಾಗುತ್ತಿವೆ. ಇದೀಗ ಅಲ್ಲಿನ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಹೋಳಿ ಆಚರಣೆಯನ್ನು ನಿಷೇಧಿಸಲಾಗಿದೆ ಎಂದು ವರದಿಯಾಗಿದೆ. ಅಂದರೆ ಯಾವುದೇ ಶಾಲೆಯಲ್ಲಿ ಹೋಳಿ ಆಚರಣೆ ಮಾಡಲು ಬಿಡುವುದಿಲ್ಲ ಎಂದು ಹೇಳಲಾಗಿದೆ.
ಈ ವರ್ಷ ಹೋಳಿ ಹಬ್ಬದ ಸಂದರ್ಭದಲ್ಲಿ ಪಾಕಿಸ್ತಾನದ ಶಾಲೆಗಳಲ್ಲಿ ಹಿಂದೂಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದ್ದ ಸುದ್ದಿ ಮುನ್ನಲೆಗೆ ಬಂದಿತ್ತು. ಪಾಕಿಸ್ತಾನದ ಉನ್ನತ ಶಿಕ್ಷಣ ಆಯೋಗವು ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಹೋಳಿ ಆಚರಣೆಯನ್ನು ನಿಷೇಧಿಸಿದೆ ಎಂದು ಪಾಕಿಸ್ತಾನದ ಆಜ್ ನ್ಯೂಸ್ ವರದಿ ಮಾಡಿದೆ.
ಇಂತಹ ಚಟುವಟಿಕೆಗಳು ದೇಶದ ಸಾಮಾಜಿಕ-ಸಾಂಸ್ಕೃತಿಕ ಮೌಲ್ಯಗಳಿಗೆ ಸಂಪೂರ್ಣವಾಗಿ ಹೊರತಾಗಿವೆ, ಅವು ವಿಭಿನ್ನ ಮತ್ತು ಇಸ್ಲಾಮಿಕ್ ಗುರುತಿಗೆ ವಿರುದ್ಧವಾಗಿವೆ ಎಂದು ಹೇಳಲಾಗಿದೆ.