ಬೆಂಗಳೂರಿನಲ್ಲಿ ಹೆಚ್ಚಾದ ಹಾವುಗಳ ಕಾಟ; ಬಿಬಿಎಂಪಿ ವಿರುದ್ಧ ಸಾರ್ವಜನಿಕರ ಆಕ್ರೋಶ

ಬೆಂಗಳೂರು: ಮುಂಗಾರು ಮಳೆ ಈಗಿನ್ನೂ ಆರಂಭವಾಗುತ್ತಿದೆ. ಈ ಮಧ್ಯೆ ಸಿಲಿಕಾನ್ ಸಿಟಿಯಲ್ಲಿ ಹಾವುಗಳ ಕಾಟ ಜೋರಾಗಿದೆ. ಹೀಗಾಗಿ ಜನರು ಮನೆಯಿಂದ ಹೊರಡುವುದಕ್ಕೂ ಮುಂಚೆ ಎರಡು‌ ಮೂರು ಬಾರಿ ಕಾರ್, ಬೈಕ್, ಹೆಲ್ಮೆಟ್ ಚೆಕ್ ಮಾಡಲೇ ಬೇಕು. ಇತ್ತೀಚೆಗೆ ಪುಟ್ಟ ಪುಟ್ಟ ಹಾವಿನ ಮರಿಗಳು ಹೆಲ್ಮೆಟ್, ಗಾಡಿಯ ಡಿಕ್ಕಿ, ಶೂಗಳಲ್ಲಿ ಪತ್ತೆಯಾಗುತ್ತಿರುವ ಘಟನೆಗಳು ಹೆಚ್ಚಾಗಿವೆ.

ರಾಜ್ಯ ರಾಜಾಧಾನಿ ಬೆಂಗಳೂರು ದಿನದಿಂದ ದಿನಕ್ಕೆ ಕಾಂಕ್ರೀಟ್ ಕಾಡಾಗುತ್ತಿದೆ. ಹೀಗಾಗಿ ನಗರದೆಲ್ಲೆಡೆ ಪರಿಸರ ನಾಶವಾಗಿ ಇದೀಗಾ ಎಲ್ಲಿ ನೋಡಿದ್ರು ಬಿಲ್ಡಿಂಗ್ ಗಳಷ್ಟೇ ಕಾಣಿಸುತ್ತಿದೆ. ಸಧ್ಯ ವನ್ಯಜೀವಿಗಳು ವಾಸಿಸಬೇಕಾದ ಜಾಗದಲ್ಲಿ ಮನುಷ್ಯರು ವಾಸಿಸುತ್ತಿದ್ದು ಮನುಷ್ಯರಿರುವ ಜಾಗಗಳಿಗೆ ಇದೀಗಾ ವನ್ಯ ಜೀವಿಗಳು ಬರುತ್ತಿವೆ.‌ ಇದೀಗಾ ಮುಂಗಾರು ಮಳೆ ಆರಂಭವಾಗಿದ್ದು ನಗರಲದಲ್ಲಿ ಹಾವುಗಳ ಕಾಟ ಜೋರಾಗಿದೆ.

ಹೌದು, ಈಗಾಗಲೇ ಮಳೆಗಾಲ ಆರಂಭವಾಗಿದೆ.‌ ಇಷ್ಟು ದಿನ ಮಳೆಗಾಲದಲ್ಲಿ ಜನರು ಮನೆಯಿಂದ ಹೊರಗೆ ಹೋಗುವುದಕ್ಕೆ ಚಿಂತಿಸುತ್ತಿದ್ರು‌.‌ ಇದೀಗಾ ಮನೆಗಳಲ್ಲಿ ಇರೋದಕ್ಕೆ ಚಿಂತಿಸುವ ಸ್ಥಿತಿ ಬಂದಿದೆ. ಇದಕ್ಕೆಲ್ಲ ಪ್ರಮುಖ ಕಾರಣ ನಗರದಲ್ಲಿ ಹಾವುಗಳ ಸಂಖ್ಯೆ ಜಾಸ್ತಿಯಾಗಿರೋದು‌. ಇತ್ತೀಚಿಗೆ ಮನೆಯ ಸಂದಿ ಗೊಂದಿಗಳಲ್ಲಿ ಹಾವುಗಳು ಕಾಣಿಸಿಕೊಳ್ಳುತ್ತಿದ್ದು, ಹಾವುಗಳನ್ನ ಹಿಡಿಯುವುದಕ್ಕೆ ವನ್ಯ ಸಂರಕ್ಷಣಾ ತಂಡಕ್ಕೆ ಪ್ರತಿದಿನ 50ಕ್ಕೂ ಹೆಚ್ಚು ಕರೆಗಳು ಬರುತ್ತಿವೆಯಂತೆ. ಸಧ್ಯ ಹೆಲ್ಮೆಟ್, ಕಾಂಪೌಂಡ್, ಶೂಸ್, ವಾಟಾರ್ ಟ್ಯಾಂಕರ್, ಫುಟ್ ಪಾಥ್, ಕಾರಿನ ಸಂದಿಗೊಂದಿಗಳಲ್ಲಿ ಹಾವುಗಳು ಕಾಣಿಸಿಕೊಳ್ಳುತ್ತಿದ್ದು, ಮನೆಯಿಂದ ಹೊರಗೆ ಹೋಗುವ ಜನರು ಒಮ್ಮೆ ಹುಷಾರಾಗಿ ಎಲ್ಲಾವನ್ನ ಚೆಕ್ ಮಾಡಿ ಮನೆಯಿಂದ ಹೊರಹೋಗುವ ಪರಿಸ್ಥಿತಿ ಎದುರಾಗಿದೆ.

ಇನ್ನು ನಗರದ ಯಲಹಂಕ, ಆರ್ ಆರ್ ನಗರ, ಆರ್ ಟಿ ನಗರ, ಮಹದೇವಪುರ ಭಾಗದಲ್ಲಿ ಪ್ರತಿನಿತ್ಯ ಹಾವಿನ ದರ್ಶನವಾಗುತ್ತಿದ್ದು, ಹಾವುಗಳಿಂದಾಗಿ ಜನರು‌ ಪ್ರತಿದಿನ ರೋಸಿ ಹೋಗುತ್ತಿದ್ದಾರೆ. ಇನ್ನು ಹಾವುಗಳು ಬಂದಾಗ ಬಿಬಿಎಂಪಿ ವನ್ಯಸಂರಕ್ಷಕರ ಸಹಾಯ ಸರಿಯಾದ ಸಮಯಕ್ಕೆ ಸಿಗದೇ ಇರುವುದು ಹಾಗೂ ಕರೆಗಳನ್ನ ಸ್ವಿಕರಿಸದೇ ಇರೋದ್ರಿಂದ ಜನರು ಬಿಬಿಎಂಪಿ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇನ್ನು, ಈ ಕುರಿತಾಗಿ ವನ್ಯ ಸಂರಕ್ಷಕರನ್ನ ಪ್ರಶ್ನಿಸಿದ್ದಕ್ಕೆ ಜನರ ಬೇಡಿಕೆಗೆ ತಕ್ಕಷ್ಟು ವನ್ಯ ಸಂರಕ್ಷಕರಿಲ್ಲ. ಸಧ್ಯ ಬೆಂಗಳೂರು ವ್ಯಾಪ್ತಿಯಲ್ಲಿ 7 ಜನರಷ್ಟೇ ಹಾವುಗಳನ್ನ ಹಿಡಿಯುವ ವನ್ಯ ಸಂರಕ್ಷಕರಿದ್ದಾರೆ. ಈ ಹಿಂದೆ ದಿನಕ್ಕೆ 5 ರಿಂದ 15 ಕಾಲ್ ಗಳು ಬರುತ್ತಿದ್ವು. ಇದೀಗಾ 40 ರಿಂದ 50 ಕೆರೆಗಳು ಬರುತ್ತಿದ್ದು. ಈ 8 ಝೋನ್ ಗಳಲ್ಲಿ 7 ಜನ ವನ್ಯ ಸಂರಕ್ಷಕರಿಂದ ಎಲ್ಲಾ ಕರೆಗಳನ್ನ ಸ್ವೀಕರಿಸುವುದಕ್ಕೆ ಸಾಧ್ಯಾ ಆಗ್ತಿಲ್ಲ. ಆದ್ರು ಹೆಚ್ಚುವರಿಯಾಗಿ ವನ್ಯ ಸಂರಕ್ಷಕರನ್ನ ಬಿಬಿಎಂಪಿ ನೇಮಕ ಮಾಡಿಕೊಳ್ಳುತ್ತಿಲ್ಲ ಅಂತ ವನ್ಯಸಂರಕ್ಷಕ ಮೋಹನ್ ಹೇಳಿದ್ರು.

‌ಮಳೆಗಾಲ ಆರಂಭವಾದಾಗ ಹಾವುಗಳು ಮರಿ ಇಡುತ್ತವೆ. ಹೀಗಾಗಿ ಬೆಚ್ಚನೆಯ ಜಾಗವನ್ನ ಅರಸಿ ಬರುವುದರಿಂದ ಮನೆಯ ಸಂದಿಗೊಂದಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ಜನರು ಎಚ್ಚರಿಕೆಯಿಂದ ಇರಬೇಕಾಗಿದೆ.