ಮೊದಲ ಟೆಸ್ಟ್ ಗೆಲ್ಲುತ್ತಿದ್ದಂತೆ ಹುಚ್ಚೆದ್ದು ಕುಣಿದ ಆಸೀಸ್ ಆಟಗಾರರು

ಆಸೀಸ್ ಕ್ಯಾಪ್ಟನ್ ಕಮ್ಮಿನ್ಸ್ ಅವರ ಹೋರಾಟದ ಇನ್ನಿಂಗ್ಸ್‌ನ ಆಧಾರದ ಮೇಲೆ ಆಸ್ಟ್ರೇಲಿಯಾ 2023 ರ  ಆಸೀಸ್ Ashes 2023 ಸರಣಿಯಲ್ಲಿ ಗೆಲುವಿನ ಆರಂಭ ಪಡೆದುಕೊಂಡಿದೆ . ಮೊದಲ ಪಂದ್ಯದ ಗೆಲುವಿನೊಂದಿಗೆ ಆಸ್ಟ್ರೇಲಿಯಾ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಆಸ್ಟ್ರೇಲಿಯ ಮೊದಲ ಟೆಸ್ಟ್ ಪಂದ್ಯವನ್ನು ಗೆಲ್ಲುವಲ್ಲಿ ನಾಯಕ ಪ್ಯಾಟ್ ಕಮ್ಮಿನ್ಸ್ ಸ್ಮರಣೀಯ ಇನ್ನಿಂಗ್ಸ್ ಆಡಿದರು. ಆಸ್ಟ್ರೇಲಿಯಾ ಪರ ಎರಡನೇ ಇನ್ನಿಂಗ್ಸ್​ನಲ್ಲಿ ಉಸ್ಮಾನ್ ಖವಾಜಾ 65 ರನ್ ಗಳಿಸಿ ಟಾಪ್ ಸ್ಕೋರರ್ ಎನಿಸಿಕೊಂಡರೆ , ಪ್ಯಾಟ್ ಕಮಿನ್ಸ್ ಅಜೇಯ 44 ರನ್ ಮತ್ತು ಡೇವಿಡ್ ವಾರ್ನರ್ 36 ರನ್ ಗಳಿಸಿದರು. ಪ್ಯಾಟ್ ಕಮಿನ್ಸ್ ಮತ್ತು ನಾಥನ್ ಲಿಯಾನ್ ಒಂಬತ್ತನೇ ವಿಕೆಟ್‌ಗೆ 50+ ರನ್‌ಗಳ ಜೊತೆಯಾಟವನ್ನು ಹಂಚಿಕೊಂಡು ತಂಡವನ್ನು ಗೆಲುವಿನ ದಡ ಸೇರಿಸಿದರು.

ರಾಬಿನ್ಸನ್ ಓವರ್​ನಲ್ಲಿ ಬೌಂಡರಿ ಬಾರಿಸುವ ಮೂಲಕ ಕಮ್ಮಿನ್ಸ್ ಆಸೀಸ್ ತಂಡಕ್ಕೆ 2 ವಿಕೆಟ್​ಗಳ ರೋಚಕ ಜಯ ತಂದುಕೊಟ್ಟರು. ಇತ್ತ ಕಮ್ಮಿನ್ಸ್ ಬೌಂಡರಿ ಬಾರಿಸುತ್ತಿದ್ದಂತೆ, ಡಗೌಟ್​ನಲ್ಲಿ ಕುಳಿತ್ತಿದ್ದ ಆಸೀಸ್ ಆಟಗಾರರು ಒಬ್ಬರನ್ನೊಬ್ಬರು ತಬ್ಬಿಕೊಂಡು ಕುಣಿಯಲಾರಂಭಿಸಿದರು. ಇತ್ತ ಗೆಲುವಿನ ಬೌಂಡರಿ ಬಾರಿಸಿದ ನಾಯಕ ಕಮ್ಮಿನ್ಸ್ ತಮ್ಮ ಹೆಲ್ಮೆಟ್ ಹಾಗೂ ಬ್ಯಾಟ್ ಬೀಸಾಡಿ, ಆಸೀಸ್ ಗೆಲುವಿಗೆ ಸ್ಮರಣೀಯ ಜೊತೆಯಾಟವನ್ನಾಡಿದ ನಾಥನ್ ಲಿಯಾನ್ ಅವರನ್ನು ತಬ್ಬಿಕೊಂಡು ಸಂಭ್ರಮಾಚರಣೆ ಮಾಡಿದರು.