ಕೈ ಕಸೂತಿ ಕೆಲಸದಿಂದ ಎಲ್ಲರ ಗಮನ ಸೆಳೆದ ವೇಸ್ಟ್ ಬೆಂಗಾಲ್ ಮೂಲದ ಯುವತಿ. ಹೌದು ತನಗೆ ಗೊತ್ತಿರುವ ಕೈ ಕಸೂತಿಯನ್ನ ಗ್ರಾಮೀಣ ಭಾಗದ ಯುವತಿಯರಿಗೆ ಕಲಿಸಿಕೊಡುವ ಮೂಲಕ ಮಾದರಿಯಾಗಿದ್ದಾರೆ. ಲಾಕ್ ಡೌನ್ ಅವಧಿಯಲ್ಲಿ ಹತ್ತಾರು ಯುವತಿಯರಿಗೆ ಕೈಕಸೂತಿ ಕಲಿಸಿ ಸ್ವಾವಲಂಬನೆ ಜೀವನ ನಡೆಸುವಂತೆ ಮಾಡಿದ ಮಾದರಿ ಯುವತಿ ಇವರು.
ಇವರು ತಯಾರಿಸುವ ಮನೆ ಅಲಂಕಾರಿಕೆ ವಸ್ತುಗಳಿಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯಿದೆ. ಹೌದು ತಾನು ತಯಾರಿಸಿದ ಅಲಂಕಾರಿಕ ವಸ್ತುಗಳನ್ನ ತೋರಿಸುತ್ತಿರುವ ಇವರ ಹೆಸರು ಸುಕಲಿ ಎಂದು, ಇವರು ಮೂಲತಃ ಕೊಲ್ಕತ್ತಾದವರು. ಹೊಟ್ಟೆ ಪಾಡಿಗಾಗಿ ಕರ್ನಾಟಕದ ಬೀದರ್ ಜಿಲ್ಲೆಗೆ 9 ವರ್ಷದ ಹಿಂದೆ ಬಂದಿರುವ ಇವರು ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಕೋಣಮೆಳಕುಂದಾ ಗ್ರಾದಮದಲ್ಲಿ ನೆಲೆಕಂಡುಕೊಂಡಿದ್ದಾರೆ.
ಇನ್ನು ಇವರ ತಾಯಿ ಅಜ್ಜಿ ಕೈ ಕಸೂತಿ ಕೆಲಸದಿಂದಲೇ ಕುಟುಂಬವನ್ನ ನಿರ್ವಹಣೆ ಮಾಡುತ್ತಿದ್ದಾರೆ. ಆದರೆ, ತಾಯಿ ಹಾಗೂ ಅಜ್ಜಿಯಿಂದ ಅಲ್ಪ ಸ್ವಲ್ಪ ಕಸೂತಿ ಕೆಲಸವನ್ನ ಕಲಿತಿದ್ದ ಸುಕಲಿ ಅವರು, ಕೋವಿಡ್ನಿಂದಾ ಲಾಕ್ ಡೌನ್ ಆದಾಗ ಅದೇ ಕಸೂತಿ ಕೆಲಸವನ್ನ ಪೂರ್ಣ ಪ್ರಮಾಣದಲ್ಲಿ ಕಲಿತುಕೊಂಡು ವಿವಿಧ ಬಗೆಯ ಅಲಂಕಾರಿಕ ವಸ್ತುಗಳನ್ನ ತಯಾರಿಸಿ ತಮಗೆ ಪರಿಚಯದವರಿಗೆ ಮಾರಾಟ ಮಾಡುತಿದ್ದಾರೆ.
ಇವರು ತಯಾರಿಸುವ ವಸ್ತುಗಳ ಅಂದ ಚಂದಕ್ಕೆ ಮಾರು ಹೋಗುತ್ತಿರುವ ಮಹಿಳೆಯರು ತಾವು ಈ ಕಲೆಯನ್ನ ಕಲಿಯಬೇಕೆಂದು ಸುಕಲಿ ಬಳಿ ಕೇಳಿದಾಗ ಅವರು ಖುಷಿಯಿಂದಲೇ ಗ್ರಾಮದ ಸುಮಾರು 40 ಮಹಿಳೆಯರಿಗೆ ಇವರು ಕಲಿತಿರುವ ಕಸೂತಿ ಕಲೆಯನ್ನ ಹೇಳಿಕೊಡುತ್ತಿದ್ದು, ಆ ಮಹಿಳೆಯರು ಕೂಡ ಮನಸ್ಸುಗೊಟ್ಟು ಕಸೂತಿ ಕೆಲೆಯನ್ನ ಕಲಿಯುತ್ತಿದ್ದೇವೆಂದು ಯುವತಿಯರು ಹೇಳುತ್ತಿದ್ದಾರೆ.
ಕಳೆದ 9 ವರ್ಷದಿಂದ ಕೋಣಮೇಳಕುಂದಾ ಗ್ರಾಮದಲ್ಲಿ ನೆಲೆಸಿರುವ ಸುಕಲಿ ಅವರು ತಮಗೆ ಗೊತ್ತಿದ್ದ ಕಸೂತಿ ಕೆಲೆಯನ್ನ ಮರೆತೆ ಬಿಟ್ಟಿದ್ದರು. ಯಾವಾಗ ಲಾಕ್ ಡೌನ್ ಆಯಿತೋ ಕೆಲಸವಿಲ್ಲದೆ ಮನೆಯಲ್ಲಿ ಕುಳಿತುಕೊಳ್ಳುವ ಹಾಗಾಯಿತೋ ಅವತ್ತು ಅವರು ತಮಗೆ ಅಲ್ಪ ಸ್ವಲ್ಪ ಗೊತ್ತಿದ್ದ ಕಸೂತಿ ಕಲೆಯನ್ನ ಪೂರ್ಣ ಪ್ರಮಾಣದಲ್ಲಿ ಕಲಿತು, ಅದಕ್ಕೆ ಬೇಕಾದ ಕಚ್ಚಾ ವಸ್ತುಗಳನ್ನ ಕೋಲ್ಕತ್ತಾದಿಂದ ಅವರ ಸಂಬಂಧಿಗಳ ಕಡೆಯಿಂದ ತರಿಸಿಕೊಂಡು ಈಗ ತಮ್ಮ ಮನೆಯಲ್ಲಿಯೇ ವಿವಿಧ ವಸ್ತುಗಳನ್ನ ತಯಾರಿಸುತ್ತಿದ್ದಾರೆ.
ವೇಸ್ಟ್ ಎಂದು ನಾವು ಬಿಸಾಕುವ ವಸ್ತುಗಳನ್ನೇ ಬಳಿಸಿಕೊಂಡು ಗೊಂಬೆಗಳು, ದೇವಸ್ಥಾನ, ಬ್ಯಾಗ್, ಗಡಿಯಾರ, ಹೀಗೆ 50 ಕ್ಕೂ ಹೆಚ್ಚು ವಸ್ತುಗಳನ್ನ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಇವರು ತಯಾರಿಸುವ ವಸ್ತುವಿಗೆ ಈಗ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಶುರುವಾಗಿದೆ. ಆದರೆ, ಇವರು ಮಾತ್ರ ತಮಗೆ ಬೇಕಾದವರಿಗೆ ಮಾತ್ರ ತಾವು ಕೇಳಿದ ಡಿಸೈನ್ನಲ್ಲಿ ಅಲಂಕಾರಿಕ ವಸ್ತುಗಳನ್ನ ತಯಾರಿಸಿ ಕೊಡುತ್ತಿದ್ದಾರೆ.
ಇನ್ನು ಗ್ರಾಮದ ಮಹಿಳೆಯರು ಕೂಡ ಇವರು ಕೈ ಕಸೂತಿ ಕಲೆಯನ್ನ ಇಚ್ಚೆಯಿಂದ ಕಲಿಯುತ್ತಿದ್ದಾರೆ. ಗ್ರಾಮದ ಮಹಿಳೆಯರು, ಯುವತಿಯರು ಪೂರ್ಣ ಪ್ರಮಾಣದಲ್ಲಿ ಕಲಿತರೆ ಎಲ್ಲರೂ ಸೇರಿಕೊಂಡು ಒಂದು ಅಂಗಡಿಯನ್ನ ತೆರೆದು ತಾವೆ ಸ್ವಂತದ್ದಾದ ಉದ್ಯೋಗ ಮಾಡುವ ಯೋಚನೆಯಲ್ಲಿದ್ದಾರೆ.
ಇನ್ನು ಅಂಗಡಿ ತೆರೆಯಲು ಪೂರಕವಾದ ಎಲ್ಲಾ ಸಿದ್ದತೆಯನ್ನ ಮಾಡಿಕೊಂಡಿದ್ದಾರೆ. ಇವರು ತಯಾರಿಸುವ ವಸ್ತುಗಳನ್ನ ಮಾರಾಟದಿಂದ ಹಿಡಿದು ಇವರಿಗೆ ಬೇಕಾದ ಕಚ್ಚಾವಸ್ತುಗಳನ್ನ ಹೇಗೆ ತರಿಸಿಕೊಳ್ಳಬೇಕೆಂದು ಪ್ಯ್ಲಾನ್ ಮಾಡಿಕೊಂಡಿದ್ದು, ಶಿಘ್ರದಲ್ಲಿಯೇ ತಾವೇ ತಯಾರಿಸಿದ ವಸ್ತುಗಳನ್ನ ಮಾರಾಟ ಮಾಡಲಿದ್ದಾರೆ.