ಪ್ರಧಾನಿ ಮೋದಿಯವರ ಮನ್ ಕಿ ಬಾತ್​​​ನ 102ನೇ ಸಂಚಿಕೆ ಜೂನ್ 18ರಂದು ಪ್ರಸಾರ

ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 18 ರಂದು ಆಕಾಶವಾಣಿಯಲ್ಲಿ Mann Ki Baat ಕಾರ್ಯಕ್ರಮದಲ್ಲಿ ದೇಶದ ಜನರೊಂದಿಗೆ ಮಾತನಾಡಲಿದ್ದಾರೆ. ಮಾಸಿಕ ರೇಡಿಯೋ ಕಾರ್ಯಕ್ರಮದ 102 ನೇ ಸಂಚಿಕೆಗಾಗಿ ಮೋದಿ ಅವರು ದೇಶದ ನಾಗರಿಕರಿಂದ ವಿಷಯಗಳನ್ನು ಆಹ್ವಾನಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿದ ಮೋದಿ, ನಾಗರಿಕರಿಂದ ವಿಷಯಗಳನ್ನು ಸ್ವೀಕರಿಸಲು ಯಾವಾಗಲೂ ಸಂತೋಷವಾಗುತ್ತದೆ ಎಂದು ಹೇಳಿದ್ದಾರೆ.

ಜನರು ತಮ್ಮ ಇನ್‌ಪುಟ್‌ಗಳನ್ನು NaMo ಅಪ್ಲಿಕೇಶನ್, MyGov ನಲ್ಲಿ ಹಂಚಿಕೊಳ್ಳಬಹುದು ಅಥವಾ 1800-11-7800 ಅನ್ನು ಡಯಲ್ ಮಾಡುವ ಮೂಲಕ ತಮ್ಮ ಸಂದೇಶಗಳನ್ನು ರೆಕಾರ್ಡ್ ಮಾಡಬಹುದು. 1922 ಎಂಬ ಸಂಖ್ಯೆಗೆ ಮಿಸ್ಡ್ ಕಾಲ್ ನೀಡಿದಾಗ ಬರುವ SMS ನಲ್ಲಿರುವ ಲಿಂಕ್ ಮೂಲಕವೂ ಸಲಹೆ, ವಿಷಯಗಳನ್ನು ಕಳುಹಿಸಬಹುದು ಎಂದು ಹೇಳಿದ್ದಾರೆ.

ಜೂನ್ 18 ಸೇವ್ ಮಾಡಿಡಿ. ನರೇಂದ್ರ ಮೋದಿಯವರು ತಮ್ಮ ಜನಪ್ರಿಯ ರೇಡಿಯೋ ಕಾರ್ಯಕ್ರಮದಲ್ಲಿ ರಾಷ್ಟ್ರದೊಂದಿಗೆ  ಸಂವಾದಕ್ಕೆ ಸಿದ್ಧರಾಗುತ್ತಿದ್ದಾರೆ. ನಿಮ್ಮ ಗಮನಾರ್ಹ ಕಥೆಗಳು, ಆಲೋಚನೆಗಳು ಮತ್ತು ಆಕಾಂಕ್ಷೆಗಳನ್ನು ಪ್ರಧಾನಿಯೊಂದಿಗೆ ಹಂಚಿಕೊಳ್ಳಲು ಈ ಅವಕಾಶವನ್ನು ಕಳೆದುಕೊಳ್ಳಬೇಡಿ. ನಿಮ್ಮ ಧ್ವನಿಗೆ ಮಹತ್ವವಿದೆ ಎಂದು mygovindia ಟ್ವೀಟ್ ಮಾಡಿದೆ.