ಪ್ರಿಯಕರನ ಜತೆ ಸೇರಿ ಪತಿಯನ್ನು ಹತ್ಯೆ ಮಾಡಿ ಸೆಪ್ಟಿಕ್ ಟ್ಯಾಂಕ್ಗೆ ಎಸೆದಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಉತ್ತರ ಪ್ರದೇಶದ ಮಂಡಲ್ ಗ್ರಾಮದ ಸಾಗರ್ ಅವರ ಹತ್ಯೆಗೆ ಸಂಬಂಧಿಸಿದಂತೆ ಅವರ ಪತ್ನಿ ಆಶಿಯಾ ಮತ್ತು ಆಕೆಯ ಪ್ರಿಯಕರ ಸುಹೇಲ್ ಅವರನ್ನು ಗುರುವಾರ ಬಂಧಿಸಲಾಗಿದೆ.
ಸಾಗರ್ ಜೂನ್ 6 ರಂದು ನಾಪತ್ತೆಗಿಯಾದ್ದರು, ನಂತರ ಪೊಲೀಸರು ಆತನ ಶವವನ್ನು ಸೆಪ್ಟಿಕ್ ಟ್ಯಾಂಕ್ನಲ್ಲಿ ಪತ್ತೆ ಮಾಡಿದ್ದರು. ಪ್ರಿಯಕರ ಸುಹೇಲ್ ಸಹಾಯದಿಂದ ಪತಿಯನ್ನು ಕೊಂದು ಶವವನ್ನು ಸೆಪ್ಟಿಕ್ ಟ್ಯಾಂಕ್ಗೆ ಎಸೆದಿರುವುದಾಗಿ ಆಶಿಯಾ ತಪ್ಪೊಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುಹೇಲ್ ಜತೆಗೆ ಪತ್ನಿಗೆ ಸಂಬಂಧವಿದೆ ಎಂದು ತಿಳಿದ ಬಳಿಕ ಹೇಗಾದರೂ ಮಾಡಿ ಪತಿಯನ್ನು ಹತ್ಯೆ ಮಾಡಬೇಕು ಎಂದು ಯೋಚಿಸಿ ಮೊದಲೇ ಪ್ಲ್ಯಾನ್ ಮಾಡಿ, ಪ್ರಿಯಕರನನ್ನು ಮನೆಗೆ ಕರೆಸಿಕೊಂಡು ಇಬ್ಬರೂ ಸೇರಿ ಸಾಗರ್ನನ್ನು ಹತ್ಯೆ ಮಾಡಿದ್ದಾರೆ.
ಬಳಿಕ ಯಾರಿಗೂ ಕಾಣದಂತೆ ಸೆಪ್ಟಿಕ್ ಟ್ಯಾಂಕ್ಗೆ ಹಾಕಿ, ಏನೂ ತಿಳಿಯದವರಂತೆ ವರ್ತಿಸಿದ್ದಾರೆ. ಪೊಲೀಸರು ವಿಚಾರಣೆ ನಡೆಸಿದಾಗ ಮುಗ್ಧರಂತೆ ವರ್ತಿಸಿದ್ದರು. ಬಳಿಕ ತಪ್ಪೊಪ್ಪಿಕೊಂಡಿದ್ದಾಳೆ.