ಸೌತ್ ನಟಿ ಸಮಂತಾ ಅವರು ಚರ್ಚ್ಗೆ ಭೇಟಿ ಕೊಟ್ಟು ಪ್ರಾರ್ಥಿಸಿದ್ದಾರೆ. ಅಲ್ಲಿ ಎರಡು ಗೋಲ್ಡನ್ ಕಲರ್ ಕ್ಯಾಂಡೆಲ್ಗಳನ್ನು ಉರಿಸಿ ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಿದ್ದಾರೆ. ನಟಿ ಚರ್ಚ ಭೇಟಿಯ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
ಸಮಂತಾ ರುತ್ ಪ್ರಭು ಅವರು ಚರ್ಚ್ ಆಫ್ ಸೈಂಟ್ ಸಾವಾಗೆ ಭೇಟಿ ಕೊಟ್ಟಿದ್ದಾರೆ. ಅಲ್ಲಿಂದ ಚಂದದ ಫೋಟೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿದ್ದಾರೆ. ನನಗೆ ಚಿಕಿತ್ಸೆಯಾಗಿ ಒಂದು ವರ್ಷವಾಗಿದೆ ಎಂದು ನಟಿ ಬರೆದುಕೊಂಡಿದ್ದಾರೆ.

ಈ ನ್ಯೂ ನಾರ್ಮಲ್ಗೆ ಬದಲಾಗಿ ಒಂದು ವರ್ಷ ಆಯಿತು. ನನ್ನ ದೇಹದೊಂದಿಗೆ ಹಲವಾರು ಸಲ ಫೈಟ್ ಮಾಡಿದ್ದೇನೆ. ಉಪ್ಪಿಲ್ಲ, ಸಿಹಿ ಇಲ್ಲ, ಧಾನ್ಯಗಳಿರುವ ಕಾಕ್ಟೇಲ್ ಇಲ್ಲ. ಎಲ್ಲವನ್ನೂ ಬಲವಂತವಾಗಿ ತೊರೆಯಬೇಕಾಯಿತು ಎಂದು ಹೇಳಿದ್ದಾರೆ.
ಈ ಒಂದು ವರ್ಷ ಅರ್ಥಪೂರ್ಣ. ಅಂತರ್ಯದ ಪ್ರತಿಫಲನ. ಪ್ರೊಫೆಷನಲ್ ಸೋಲು ಕೂಡಾ ಇತ್ತು. ವರ್ಷವನ್ನು ಇನ್ನಷ್ಟು ಆಸಕ್ತಿದಾಯಕವಾಗಿ ಮಾಡಲು ಪೂಜೆಗಳು ಹಾಗೂ ಪ್ರಾರ್ಥನೆಗಳು. ಗಿಫ್ಟ್ಗಾಗಿ ಪ್ರಾರ್ಥಿಸುತ್ತಿಲ್ಲ. ಮತ್ತಷ್ಟು ಶಕ್ತಿಗಾಗಿ ಹಾಗೂ ಶಾಂತಿಗಾಗಿ ಪ್ರಾರ್ಥನೆ ಎಂದಿದ್ದಾರೆ.
ನಿಮಗೆ ಬೇಕಾದಂತೆ ಎಲ್ಲಾ ಸಮಯದಲ್ಲಿ ಎಲ್ಲವೂ ನಡೆಯುವುದಿಲ್ಲ ಎಂದು ತೋರಿಸಿಕೊಟ್ಟ ವರ್ಷ. ಹಾಗಾಗದಿದ್ದರೂ ಪರವಾಗಿಲ್ಲ ಎಂದು ತಿಳಿಸಿಕೊಟ್ಟ ವರ್ಷ. ನನಗೆ ಕಂಟ್ರೋಲ್ ಮಾಡಲು ಸಾಧ್ಯವಾಗುವುದನ್ನಷ್ಟೇ ಕಂಟ್ರೋಲ್ ಮಾಡಿ ಉಳಿದ ವಿಚಾರಗಳನ್ನು ಅವುಗಳ ಪಾಡಿಗೆ ಹೋಗಲು ಬಿಡಲು ಕಲಿಸಿದ ವರ್ಷ ಎಂದು ಬರೆದಿದ್ದಾರೆ.
ಬಹಳಷ್ಟು ಕಷ್ಟಪಟ್ಟು ಹೋರಾಡುತ್ತಿರುವ ಬಹಳಷ್ಟು ಜನರಿರಬಹುದು. ಅವರಿಗಾಗಿ ಪ್ರಾರ್ಥಿಸುತ್ತೇನೆ. ದೇವರು ಸ್ವಲ್ಪ ತಡ ಮಾಡಬಹುದು. ನೀಡದೇ ಇರಲಾರ. ದೇವರು ಎಂದೂ ಶಾಂತಿ, ನೆಮ್ಮದಿ, ಪ್ರೀತಿ, ಖುಷಿ, ಶಕ್ತಿಯನ್ನು ನಿರಾಕರಿಸುವುದಿಲ್ಲ ಎಂದಿದ್ದಾರೆ.



