ಪ್ರವಾಸಿಗರ ಹಿತದೃಷ್ಟಿಯಿಂದ ಮುರುಡೇಶ್ವರ ಬೀಚ್ ಬಂದ್ : 4 ತಿಂಗಳು ಪ್ರವಾಸಿಗರಿಗೆ ಸಮುದ್ರ ತೀರಕ್ಕೆ ತೆರಳದಂತೆ ನಿಷೇದ

ಭಟ್ಕಳ: ಮುರುಡೇಶ್ವರಕ್ಕೆ ಬರುವ ಪ್ರವಾಸಿಗರ ಹಿತ ದೃಷ್ಟಿಯಿಂದಾಗಿ ಮುರುಡೇಶ್ವರ ಸಮುದ್ರಕ್ಕೆ ತೀರಕ್ಕೆ ತೆರಳುವ ಎರಡು ಮಾರ್ಗಗಳನ್ನು ಮುಂದಿನ 4 ತಿಂಗಳವರರೆಗೆ ಬ್ಯಾರಿಗೇಟ್ ಹಾಕಿ ಬಂದ ಮಾಡುವುದರೊಂದಿಗೆ ಸಮುದ್ರ ತೀರಕ್ಕೆ ತೆರಳಲು ನಿರ್ಬಂಧ ಹೇರಲಾಗಿದೆ.

ಹೌದು, ಕಳೆದ ಎರಡು ದಿನಗಳಲ್ಲಿ ಮುರುಡೇಶ್ವರಕ್ಕೆ ಬಂದ ಇಬ್ಬರು ಪ್ರವಾಸಿಗರು ಇಲ್ಲಿನ ಲೈಫ್ ಗಾರ್ಡ್ಸ್ ಗಳ ಮಾತು ಧಿಕ್ಕರಿಸಿ ಸಮುದ್ರಕ್ಕಿಳಿದು ನೀರು ಪಾರಾಗಿದ್ದಾರೆ. ಹಾಗೂ ಮಳೆಗಾಲದ ಅಬ್ಬರದ ಸೈಕ್ಲೋನ್ ನಿಂದ ಸಮುದ್ರದ ಅಲೆಗಳ ಉಬ್ಬರ ಇಳಿತ ಹೆಚ್ಚಾಗಿರುವ ಹಿನ್ನೆಲೆ ಸಮುದ್ರ ತೀರಕ್ಕೆ ಪ್ರವಾಸಿಗರು ಈಜಲು ಹಾಗೂ ಸಮುದ್ರ ತೀರಕ್ಕೆ ತೆರಳಲು ನಿರ್ಬಂಧ ಹೇರಲಾಗಿದೆ. ಮುರುಡೇಶ್ವರ ಸಮುದ್ರ ತೀರಕ್ಕೆ ತೆರಳುವ ಎರಡು ಮಾರ್ಗಗಳನ್ನು ಬ್ಯಾರಿಗೇಟ್ ಮೂಲಕ ಬಂದ್ ಮಾಡಲಾಗಿದೆ.

ಈ ಬಗ್ಗೆ ಮಾತನಾಡಿದ ಬೀಚ್ ಮುರುಡೇಶ್ವರ ಬೀಚ್ ಸೂಪರ್ವೈಸರ್ ದತ್ತಾತ್ರೇಯ ಶೆಟ್ಟಿ ಪ್ರತಿಕ್ರಿಯೆಸಿದ್ದು ‘ವಿಶ್ವ ಪ್ರಸಿದ್ಧ ಮುರುಡೇಶ್ವರಕ್ಕೆ ದಿನ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದು, ದೇವರ ದರ್ಶನ ಮುಗಿಸಿ ಸಮುದ್ರಕ್ಕೆ ಈಜಲು ತೆರಳಲು ಬಂದ ವೇಳೆ ನಮ್ಮ ಲೈಫ್ ಗಾರ್ಡ್ ಗಳ ಮಾತು ಕೇಳದೇ ಸಮುದ್ರಕ್ಕೆ ಈಜಲು ತೆರಳಿ ಜೀವ ಕಳೆದುಕೊಳ್ಳುವ ಪರಿಸ್ಥಿತಿ ಉಂಟಾಗಿದೆ. ಸದ್ಯ ಮಳೆಗಾಲ ಆರಂಭವಾಗಿದ್ದು ಜಿಲ್ಲೆಗೆ ಸೈಕ್ಲೋನ್ ಕೂಡ ಪ್ರವೇಶವಾಗಿರುವ ಹಿನ್ನೆಲೆಯಲ್ಲಿ ಸಮುದ್ರ ತೀರಕ್ಕೆ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದ್ದು ಸಮುದ್ರಕ್ಕೆ ತೆರಳುವ ಎರಡು ಮಾರ್ಗಗಳನ್ನು ಬಂದ್ ಮಾಡಿದ್ದೇವೆ. ಮುಂದಿನ ನಾಲ್ಕು ತಿಂಗಳು ಸಮುದ್ರ ತೀರಕ್ಕೆ ನಿರ್ಬಂಧ ಹೇರಲಾಗಿದ್ದು, ಅಕ್ಟೊಬರ್ ತಿಂಗಳಿಂದ ಪ್ರವೇಶ ಮಾಡಿಕೊಡಲಾಗುದು ಎಂದ ಅವರು ಜಿಲ್ಲಾಡಳಿತಕ್ಕೆ ಈ ಬಗ್ಗೆ ಮಾಹಿತಿ ನೀಡಲಾಗಿದ್ದು ಅವರ ಮಾರ್ಗದರ್ಶನದಲ್ಲಿ ಸಮುದ್ರ ತೀರದ ಪ್ರವೇಶ ನಿಷೇಧ ಮಾಡಲಾಗಿದೆ ಎಂದರು.