ನವದೆಹಲಿ (ಜೂ.13): ಹೊಸ ಹಾಗೂ ಈಗಾಗಲೇ ಇರುವ ಪಾಲಿಸಿದಾರರಿಗೆ ಆಯುಷ್ಮಾನ್ ಭಾರತ್ ಹೆಲ್ತ್ ಅಕೌಂಟ್ (ಆಭಾ) ಸಂಖ್ಯೆ (ಐಡಿ) ಪಡೆಯುವಂತೆ ಎಲ್ಲ ವಿಮಾ ಕಂಪನಿಗಳಿಗೆ ಭಾರತೀಯ ವಿಮಾ ನಿಯಂತ್ರಣ ಹಾಗೂ ಅಭಿವೃದ್ಧಿ ಪ್ರಾಧಿಕಾರ ನಿರ್ದೇಶನ ನೀಡಿದೆ. ಈ ಯೋಜನೆಯಡಿಯಲ್ಲಿ ಸರ್ಕಾರ ಪಾಲಿಸಿದಾರರ ಆರೋಗ್ಯ ಸಂಬಂಧಿ ಮಾಹಿತಿಗಳನ್ನು ಕಲೆ ಹಾಕಲಿದೆ ಹಾಗೂ ಅದನ್ನು ವಿಶಿಷ್ಟ ಆಭಾ ಐಡಿ ಅಡಿಯಲ್ಲಿ ಸಂಗ್ರಹಿಸಲಿದೆ. ಈ ಐಡಿ ಆರೋಗ್ಯ ಸಂಬಂಧಿ ಎಲ್ಲ ಮಾಹಿತಿಗಳನ್ನು ಒಂದೇ ಸ್ಥಳದಲ್ಲಿ ಸಂಗ್ರಹಿಸಿಡಲು ನೆರವು ನೀಡುತ್ತದೆ. ಈ ಎಲ್ಲ ಮಾಹಿತಿಗಳನ್ನು ಒಂದೇ ಕಡೆ ಸಂಗ್ರಹಿಸಿಡೋದ್ರಿಂದ ಪಾರದರ್ಶಕತೆ ಜೊತೆಗೆ ಆಸ್ಪತ್ರೆಗಳಿಗೆ ರೋಗಿಗಳ ಆರೋಗ್ಯ ಮಾಹಿತಿಗಳನ್ನು ಸುಲಭ ಹಾಗೂ ತ್ವರಿತವಾಗಿ ಪಡೆಯಲು ನೆರವಾಗಲಿದೆ. ಜನರು ತಮ್ಮ ಆರೋಗ್ಯ ಮಾಹಿತಿಗಳನ್ನು ಹಂಚಿಕೊಳ್ಳಬಹುದು ಹಾಗೂ ದೇಶಾದ್ಯಂತ ಆರೋಗ್ಯ ಸೇವೆಗಳನ್ನು ಪಡೆಯಬಹುದು. ಇದು ಆರೋಗ್ಯ ಸೇವೆ ನೀಡುವ ಸಂಸ್ಥೆಗಳಿಗೆ ಸಾಕಷ್ಟು ನೆರವು ನೀಡಲಿದೆ. ಇನ್ನು ಆಭಾ ಐಡಿ ಪಾಲಿಸಿದಾರರನ್ನು ಡಿಜಿಟಲಿ ಪತ್ತೆ ಹಚ್ಚಲು ನೆರವು ನೀಡುತ್ತದೆ. ಹಾಗೆಯೇ ಇದು ಎಲ್ಲ ನಾಗರಿಕರಿಗೆ ಉತ್ತಮ ಆರೋಗ್ಯ ಸೇವಾ ಪ್ರಯೋಜನಗಳನ್ನು ಒದಗಿಸುತ್ತದೆ.
ಆಯುಷ್ಮಾನ್ ಭಾರತ್ ಹೆಲ್ತ್ ಅಕೌಂಟ್ (ಆಭಾ) ಐಡಿಯನ್ನು ನೀವು ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಮಿಷನ್ ಅಧಿಕೃತ ವೆಬ್‌ಸೈಟ್ ( https://ndhm.gov.in) ಮೂಲಕ ಪಡೆಯಬಹುದು. ಇನ್ನು ABHA ಮೊಬೈಲ್ ಅಪ್ಲಿಕೇಷನ್ ಮೂಲಕ ಕೂಡ ಪಡೆಯಬಹುದು. ಹಾಗೆಯೇ Paytm ಮಾದರಿಯ ಇತರ ಥರ್ಡ್ ಪಾರ್ಟಿ ಅಪ್ಲಿಕೇಷನ್ ಗಳ ಮೂಲಕ ಪಡೆಯಲು ಕೂಡ ಅವಕಾಶವಿದೆ. ಇನ್ನು ಕೆಲವು ಆರೋಗ್ಯ ಕೇಂದ್ರಗಳು ಆನ್ ಲೈನ್ ನೋಂದಣಿಗೆ ಸೌಲಭ್ಯ ಹಾಗೂ ಸಹಾಯ ನೀಡಬಲ್ಲ