ಕೊಲ್ಹಾಪುರ(ಜೂ.07): ಅಹಮ್ಮದನಗರವನ್ನು ಅಹಿಲ್ಯನಗರ ಎಂದು ಮಹಾರಾಷ್ಟ್ರ ಸರ್ಕಾರ ಮರುನಾಮಕರಣ ಮಾಡಿದ ಬೆನ್ನಲ್ಲೆ ಕೊಲ್ಹಾಪುರದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಸರ್ಕಾರದ ನಿರ್ಧಾರಕ್ಕೆ ಪ್ರತಿಯಾಗಿ ಕೆಲ ಸಮುದಾಯದ ಮುಖಂಡರು ಸೇರಿದಂತೆ ಹಲವರು ತಮ್ಮ ವ್ಯಾಟ್ಸ್ಆ್ಯಪ್‌ನಲ್ಲಿ ಔರಂಗಜೇಬ್ ಹಾಗೂ ಟಿಪ್ಪು ಸುಲ್ತಾನ್ ಫೋಟೋಗಳು, ಬರಹಳ ವ್ಯಾಟ್ಸ್ಆ್ಯಪ್ ಸ್ಟೇಟಸ್ ಹಾಕಲಾಗಿತ್ತು. ಜೊತೆಗೆ ಸಾಮಾಜಿ ಜಾಲತಾಣದಲ್ಲಿ ಔರಂಗಜೇಬ್ ಹಾಗೂ ಟಿಪ್ಪು ಪರ ಪೋಸ್ಟ್ ಹಾಕಲಾಗಿದೆ. ಮಹಾರಾಷ್ಟ್ರ ಔರಂಗಜೇಬ್ ರಾಜ್ಯ. ಇದು ಟಿಪ್ಪು ಸುಲ್ತಾನನ ರಾಜ್ಯ ಎಂದು ಬರೆಯಲಾಗಿದೆ. ಇದರಿಂದ ಕೆರಳಿದ ಹಿಂದೂ ಸಂಘಟನೆಗೆ ಕೊಲ್ಹಾಪುರ ಬಂದ್‌ಗೆ ಕರೆ ನೀಡಿತ್ತು. ಈ ಬಂದ್ ವೇಳೆ ಹಿಂಸಾಚಾರ ಭುಗಿಲೆದ್ದಿದೆ. ಇದೀಗ ಪರಿಸ್ಥಿತಿ ನಿಯಂತ್ರಣಕ್ಕೆ ಕೊಲ್ಹಾಪುರದಲ್ಲಿ ಇಂಟರ್‌ನೆಟ್ ಸ್ಥಗಿತಗೊಳಿಸಲಾಗಿದೆ.
ಮಹಾರಾಷ್ಟ್ರ ಛತ್ರಪತಿ ಶಿವಾಜಿಯ ರಾಜ್ಯ. ಇಲ್ಲಿ ದಾಳಿಕೋರ, ಮತಾಂಧ ಔರಂಗಜೇಬ್ ಹಾಗೂ ಟಿಪ್ಪು ಸುಲ್ತಾನನ ವೈಭವೀಕರಣ ಅಗತ್ಯವಿಲ್ಲ ಎಂದು ಹಿಂದೂ ಸಂಘಟನೆಗಳು ಬಂದ್‌ಗೆ ಕರೆ ನೀಡಿತ್ತು. ಇದನ್ನು ವಿರೋಧಿಸಿ ಮುಸ್ಲಿಂ ಸಮುದಾಯ ಪ್ರತಿಭಟನೆ ನಡೆಸಿದೆ. ಹೀಗಾಗಿ ಕೊಲ್ಹಾಪುರ ಧಗಧಗಿಸಿದೆ. ಹಿಂಸಾಚಾರ ತೀವ್ರಗೊಳ್ಳುತ್ತಿದ್ದ ಮಹಾರಾಷ್ಟ್ರ ಸರ್ಕಾರ ಹೆಚ್ಚುವರಿ ಪೊಲೀಸ್ ನಿಯೋಜಿಸಿದೆ. ಕೆಲೆವೆಡೆ ಆಶ್ರುವಾಯು ಸಿಡಿಸಲಾಗಿದೆ. ಸೂಕ್ಷ್ಮ ಪ್ರದೇಶದಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.