ಎಲ್ಲಾ ಇಲಾಖೆಗಳಂತೆ ಪೊಲೀಸ್ ಇಲಾಖೆಯಲ್ಲಿ ಕೂಡ ನಿಷ್ಟ ಅಧಿಕಾರಿಗಳಂತೆ ಅಧಿಕಾರವನ್ನು ದುರುಪಯೋಗ ಮಾಡಿಕೊಳ್ಳುವವರೂ ಇದ್ದಾರೆ.
ಎಲ್ಲಾ ಇಲಾಖೆಗಳಂತೆ ಇಲಾಖೆಯಲ್ಲಿ ಕೂಡ ನಿಷ್ಟ ಅಧಿಕಾರಿಗಳಂತೆ ಅಧಿಕಾರವನ್ನು ದುರುಪಯೋಗ ಮಾಡಿಕೊಳ್ಳುವವರೂ ಇದ್ದಾರೆ. ಕೆಲವರು ಸಾರ್ವಜನಿಕರ ಸೇವೆಗಾಗಿಯೇ ತಮ್ಮನ್ನು ಮೀಸಲಿಟ್ಟಿದ್ದರೆ ಇನ್ನೂ ಕೆಲವರು ಸಣ್ಣ ಪುಟ್ಟ ಗೂಡಂಗಡಿಗಳನ್ನು ಹಾಕಿಕೊಂಡು ಜೀವನ ನಡೆಸುವವರ ಬಳಿಯೂ ಹಣ ವಸೂಲಿ ಮಾಡುತ್ತಿದ್ದಾರೆ. ಅಂತಹ ಒಂದು ಘಟನೆ ತಮಿಳುನಾಡಿನ ಚೆಂಗಲ್ಪಟ್ಟುವಿನಲ್ಲಿ ನಡೆದಿದೆ.
ಮಹಿಳಾ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಹಾಗೂ ಮೂವರು ಕಾನ್ಸ್ಟೆಬಲ್ಗಳು ಅಂಗಡಿಯೊಂದಕ್ಕೆ ಬಂದು, ಬ್ರೆಡ್ ಆಮ್ಲೆಟ್ ತಿಂದು, ಜ್ಯೂಸ್ ಕುಡಿದು, ನೀರಿನ ಬಾಟಲಿ ಖರೀದಿಸಿದ್ದರು, ಹಣ ಕೇಳಿದ್ದಕ್ಕೆ ಕೊಡೋಕಾಗಲ್ಲ ಹೋಗು, ಹೆಚ್ಚು ಮಾತಾಡಿದ್ರೆ ಲೈಸೆನ್ಸ್ ಕ್ಯಾನ್ಸಲ್ ಮಾಡಿಸ್ತೀನಿ ಎಂದು ಧಮ್ಕಿ ಹಾಕಿದ್ದರು ಎನ್ನಲಾಗಿದೆ.
ಸಬ್ ಇನ್ಸ್‌ಪೆಕ್ಟರ್ ವಿಜಯಲಕ್ಷ್ಮಿ ಮತ್ತು ಮೂವರು ಕಾನ್‌ಸ್ಟೆಬಲ್‌ಗಳನ್ನು ಅಮಾನತುಗೊಳಿಸಲಾಗಿದೆ. ವಿಜಯಲಕ್ಷ್ಮಿ ಎಂಬವರು ಕಾನ್‌ಸ್ಟೆಬಲ್‌ಗಳ ಜೊತೆ ಇತ್ತೀಚೆಗೆ ಠಾಣೆ ಬಳಿಯಿರುವ ಜ್ಯೂಸ್ ಸೆಂಟರ್‌ಗೆ ಭೇಟಿ ನೀಡಿದ್ದರು.
ಅಂಗಡಿ ಮಾಲೀಕ ಮಣಿಮಂಗಲಂ ದೂರು ದಾಖಲಿಸಿಕೊಂಡಿದ್ದು, ಸಿಸಿಟಿವಿ ದೃಶ್ಯಾವಳಿ ಆಧರಿಸಿ ತನಿಖೆ ಆರಂಭಿಸಲಾಗಿದೆ. ಇದೇ ವೇಳೆ ತಾಂಬರಂ ಕಮಿಷನರ್ ಅಮಲರಾಜ್ ಸಬ್ ಇನ್ಸ್ ಪೆಕ್ಟರ್ ವಿಜಯಲಕ್ಷ್ಮಿ ಮತ್ತು ಇತರ ಮೂವರು ಕಾನ್‌ಸ್ಟೆಬಲ್ ಗಳನ್ನು ಅಮಾನತುಗೊಳಿಸಿದ್ದಾರೆ.