ಯಲ್ಲಾಪುರ:ಹಸಿರೇ ಉಸಿರಾಗಿದ್ದು,ಪ್ರಜ್ಞಾವಂತ ಜನತೆ ಪ್ಲಾಸ್ಟಿಕ್ ತ್ಯಾಜ್ಯದ ಬಗೆಗೆ ಜನರಲ್ಲಿ ಜಾಗೃತಿ ಮೂಡಿಸಬೇಕು


ಯಲ್ಲಾಪುರ: ಹಸಿರೇ ಉಸಿರಾಗಿದ್ದು, ಪ್ರಜ್ಞಾವಂತ ಜನತೆ ಪ್ಲಾಸ್ಟಿಕ್ ತ್ಯಾಜ್ಯದ ಬಗೆಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಸಿವಿಲ್ ನ್ಯಾಯಾಧೀಶೆ ಲಕ್ಷ್ಮೀಬಾಯಿ ಬಸವರಾಜ ಪಾಟೀಲ್ ಹೇಳಿದರು.
ಅವರು ಸೋಮವಾರ ಪಟ್ಟಣದ ನ್ಯಾಯಾಲಯ ಆಧಾರದಲ್ಲಿ ವಿಶ್ವಪರಿಸರ ದಿನಾಚರಣೆ ಪ್ರಯುಕ್ತ ಕಾನೂನು ಸೇವಾ ಸಮಿತಿ, ವಕೀಲರ ಸಂಘ,ಅರಣ್ಯಇಲಾಖೆ,ಹಾಗೂ ಸ್ಕೌಟ್ ಗೈಡ್ಸ್ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಗಿಡನೆಟ್ಟು ಜಾಗ್ರತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.
ನ್ಯಾಯವಾದಿ ಎನ್.ಟಿ.ಗಾಂವ್ಕಾರ,ಸಹಾಯಕ ಸರಕಾರಿ ಅಭಿಯೋಜಕರಾದ ಝಿನತ್ ಭಾನು ಶೇಖ,ಶಿವರಾಯ ದೇಸಾಯಿ,ಆರ್ ಎಫ್ ಓ ಎಲ್.ಎ.ಮಠ,ನ್ಯಾಯವಾದಿಗಳಾದ ಕೆ.ಎನ್.ಹೆಗಡೆ,ಸರಸ್ವತಿ ಭಟ್,ಗಣೇಶ ಪಾಠಣಕರ್, ಪ್ಯಾರಾ ಲೀಗಲ್ ವಾಲಂಟೀಯರಾದ ಸುಧಾಕರ ನಾಯಕ,ಗಣಪತಿ ನಾಯ್ಕ ಇದ್ದರು. ವಕೀಲರ ಸಂಘದ ಅಧ್ಯಕ್ಷ ಆರ್.ಕೆ.ಭಟ್ ಅಧ್ಯಕ್ಷತೆ ವಹಿಸಿದ್ದರು.