ವಿದ್ಯುತ್ ಫ್ರೀ ನಡುವೆಯೇ ಜನರಿಗೆ ಕರೆಂಟ್ ಶಾಕ್: 2023ರ ಏಪ್ರಿಲ್ನಿಂದ ಡಿಸೆಂಬರ್ ವರೆಗೂ ವಿದ್ಯುತ್ ದರ ಹೆಚ್ಚಳ, ಎಷ್ಟೆಷ್ಟು? ಇಲ್ಲಿದೆ ವಿವರ

ಫ್ರೀ ಗ್ಯಾರಂಟಿಯಿಂದ ಜನರು ಖುಷಿ ಆಗಿದ್ರು. ಎಲ್ಲರಿಗೂ 200 ಯುನಿಟ್ ಫ್ರೀ ಅಂದಿದ್ದೇ ತಡ ನೋಡಿ. ಸಂಭ್ರಮ ಇತ್ತು. ಆದ್ರೆ ಇದೀಗ ಮತ್ತೆ ಕರೆಂಟ್ ಬಿಲ್ ಹೆಚ್ಚಳ ಮಾಡುವ ಮೂಲಕ ರಾಜ್ಯದ ಜನರಿಗೆ ರಾಜ್ಯ ಸರ್ಕಾರ ಕರೆಂಟ್ ಶಾಕ್ ಕೊಟ್ಟಿದೆ. ಏಪ್ರಿಲ್ 2023 ರಿಂದ ಹಿಡಿದು ಡಿಸೆಂಬರ್ 2023 ವರೆಗೂ ಹೆಚ್ಚಳ ಆಗಿದೆ.
ಬೆಂಗಳೂರು: ಫ್ರೀ.. ಫ್ರೀ.. ಫ್ರೀ.. ಸಿದ್ದರಾಮಯ್ಯ ಸರ್ಕಾರದ ಫ್ರೀ ಗ್ಯಾರಂಟಿಗೆ ಜನ ಖುಷ್ ಆಗಿದ್ದರು. ಎಲ್ಲರಿಗೂ 200 ಯುನಿಟ್ ವಿದ್ಯುತ್ ಫ್ರೀ ಅಂದಿದ್ದೇ ತಡ ನೋಡಿ. ಅದೇನ್ ಸಂಭ್ರಮ ಅಂತೀರಾ. ಅದೇನ್ ಜೈಕಾರ.. ಎಲ್ಲರಲ್ಲೂ ಸಂಭ್ರಮವೋ ಸಂಭ್ರಮ.. ಅಬ್ಬಾ. ಇವರಾದ್ರೂ ನಮ್ಮ ಕಷ್ಟಗಳನ್ನ ಅರಿತು ಏನಾದ್ರೂ ಕೊಡುತ್ತಿದ್ದಾರೆ ಎಂದು ಎಲ್ಲರೂ ನಿಟ್ಟುಸಿರುಬಿಟ್ಟಿದ್ದರು. ಜುಲೈ 1ರಿಂದ ಜಾರಿ ಹೊತ್ತಲ್ಲೇ ರಾಜ್ಯದ ಜನತೆಗೆ ರಾಜ್ಯ ಸರ್ಕಾರ ಕರೆಂಟ್ ಶಾಕ್ ಕೊಟ್ಟಿದೆ. ಪ್ರತೀ ಯುನಿಟ್ಗೆ 70 ಪೈಸೆ ಹೆಚ್ಚಳ ಮಾಡಿ ರಾಜ್ಯದ ಜನತೆಗೆ ಸರ್ಕಾರ ಕರೆಂಟ್ ಶಾಕ್ ಕೊಟ್ಟಿದೆ. ಇದು ಜುಲೈ 1ರಿಂದಲೇ ಜಾರಿಯಾಗಲಿದೆ. ಈ ಸಂಬಂಧ ಖುದ್ದು ಕೆಇಆರ್ಸಿಯೇ ಆದೇಶ ಹೊರಡಿಸಿದೆ.

ಏಪ್ರಿಲ್ ತಿಂಗಳಲ್ಲೇ ಪ್ರತಿ ಯುನಿಟ್ಗೆ 70 ಪೈಸೆ ಹೆಚ್ಚಳ ಮಾಡಿ ಕೆಇಆರ್ಸಿ ಆದೇಶ ಹೊರಡಿಸಿತ್ತು. ಆದ್ರೆ ಚುನಾವಣೆ ಇದ್ದಿದ್ರಿಂದ ಕರೆಂಟ್ ಬಿಲ್ ಹೆಚ್ಚಳ ಆದೇಶಕ್ಕೆ ತಡೆ ಹಿಡಿಯಲಾಗಿತ್ತು. ಈಗ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಮುಂದಿನ ತಿಂಗಳು ಅಂದ್ರೆ ಜುಲೈ 1ರಿಂದಲೇ ಕರೆಂಟ್ ಬಿಲ್ ಹೆಚ್ಚಳ ಆಗುವ ಮೂಲಕ ಹೊಸ ಪರಿಷ್ಕೃತ ದರ ಜಾರಿಯಾಗಲಿದೆ.
ವಿದ್ಯುತ್ ಸರಬರಾಜು ಮಾಡುವ 5 ನಿಗಮಗಳಲ್ಲೂ ಹೆಚ್ಚಳ ಮಾಡಲಾಗಿದೆ. ಕೆಇಆರ್ಸಿಯಲ್ಲಿ ವಾರ್ಷಿಕ ಪರಿಷ್ಕರಣೆಯಲ್ಲಿ 70 ಪೈಸೆ ಹೆಚ್ಚಳವಾಗಿದೆ. 2023ರವರೆಗೂ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಜುಲೈ 2023ರಿಂದ ಡಿಸೆಂಬರ್ ವರೆಗೂ ಆಗಿರುವ ಹೆಚ್ಚಳದ ಡೀಟೇಲ್ಸ್ ಲಭ್ಯವಾಗಿದೆ. ಹಾಗಾದ್ರೆ 2023ರ ವರೆಗೂ ಎಷ್ಟೆಷ್ಟು ಹೆಚ್ಚಳ ಆಗಿದೆ ಎನ್ನುವುದನ್ನು ನೋಡೋದಾದರೆ,

ಜುಲೈ 2023 ರಿಂದ ಸೆ.31 ರವರೆಗೆ ಹೆಚ್ಚಳ
ಬೆಸ್ಕಾಂ: 51 ಪೈಸೆ
ಮೆಸ್ಕಾಂ: 47 ಪೈಸೆ
ಚೆಸ್ಕಾಂ: 41 ಪೈಸೆ
ಹೆಸ್ಕಾಂ: 50 ಪೈಸೆ
ಜೆಸ್ಕಾಂ: 34 ಪೈಸೆ
ಅಕ್ಟೋಬರ್ 2023 ರಿಂದ ಡಿಸೆಂಬರ್ 30 ರವರೆಗಿನ ಹೆಚ್ಚಳ
ಬೆಸ್ಕಾಂ: 50 ಪೈಸೆ
ಮೆಸ್ಕಾಂ: 46 ಪೈಸೆ
ಚೆಸ್ಕಾಂ: 41 ಪೈಸೆ
ಹೆಸ್ಕಾಂ: 50 ಪೈಸೆ
ಜೆಸ್ಕಾಂ: 33 ಪೈಸೆ
ಹೀಗೆ 2023ರವರೆಗೂ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ.