ವಿದ್ಯಾಪೀಠ’ ಮೆಗಾ ಶೈಕ್ಷಣಿಕ ಮೇಳ – 2ನೇ ದಿನವೂ ವಿದ್ಯಾರ್ಥಿಗಳಿಂದ ಭರ್ಜರಿ ರೆಸ್ಪಾನ್ಸ್‌

ಬೆಂಗಳೂರು: ಪಬ್ಲಿಕ್‌ ಟಿವಿ ಪ್ರಸ್ತುತಪಡಿಸಿರುವ ವಿದ್ಯಾಪೀಠ 6ನೇ ಆವೃತ್ತಿ ಶೈಕ್ಷಣಿಕ ಮೇಳಕ್ಕೆ 2ನೇ ದಿನವೂ ಜನ ಸಾಗರ ಹರಿದು ಬರುತ್ತಿದೆ. ಬೃಹತ್‌ ಎಜುಕೇಷನ್‌ ಎಕ್ಸ್‌ಪೋ ಕೊನೆ ದಿನವಾಗಿದ್ದು, ಜನಜಾತ್ರೆ ನೆರೆದಿದೆ.

ಮೇಳದ ಸ್ಟಾಲ್‌ಗಳ ಮುಂದೆ ವಿದ್ಯಾರ್ಥಿಗಳು ಹಾಗೂ ಪೋಷಕರು ಸಾಲುಗಟ್ಟಿ ನಿಂತು ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಇದರ ಜೊತೆಗೆ ವಿದ್ಯಾರ್ಥಿಗಳಿಗೆ ಅನೇಕ ಸ್ಪರ್ಧೆಗಳನ್ನು ಸಹ ಆಯೋಜನೆ ಮಾಡಲಾಗಿದೆ. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಆಕರ್ಷಕ ಬಹುಮಾನ ಕೂಡ ನೀಡಲಾಗುವುದು

ಅಲ್ಲದೇ HAND WRITING ಎಕ್ಸ್‌ಪರ್ಟ್ ಡಾ. ರಫೀಉಲ್ಲಾ ಬೇಗ್‌ ಅವರು ವಿಶೇಷ ಕಾರ್ಯಕ್ರಮ ನಡೆಸಿಕೊಟ್ಟರು. ವಿದ್ಯಾರ್ಥಿಗಳಿಗೆ ಉಪಯುಕ್ತ ಮಾಹಿತಿ ನೀಡಿದರು.

ಶೈಕ್ಷಣಿಕ ಮೇಳಕ್ಕೆ ಭಾನುವಾರವಾದ ಇಂದು ಕೊನೆ ದಿನವಾಗಿದ್ದು, ಸಂಜೆ 7 ಗಂಟೆವರೆಗೆ ಎಕ್ಸ್‌ಪೋ ನಡೆಯಲಿದೆ. ಸಿಇಟಿ ಸಂಬಂಧ ಸೆಮಿನಾರ್ ಸಹ ಜರುಗಲಿದೆ. ಇದಲ್ಲದೇ ಬೈಸಿಕಲ್, ಲ್ಯಾಪ್‌ಟಾಪ್, ಸೇರಿದಂತೆ ಹಲವು ಬಂಪರ್ ಗಿಫ್ಟ್ ಗೆಲ್ಲೋ ಅವಕಾಶ ವಿದ್ಯಾರ್ಥಿಗಳಿಗೆ ಸಿಗಲಿದೆ. ಬನ್ನಿ ಭಾಗವಹಿಸಿ ಜ್ಞಾನಾರ್ಜನೆ ಜೊತೆಗೆ ಆಕರ್ಷಕ ಬಹುಮಾನ ಗೆಲ್ಲಿ.