ಬೆಂಗಳೂರು: ವೀಸಾ ವೆರಿಫಿಕೇಶನ್​ಗೆಂದು ಮನೆಗೆ ಆಗಮಿಸಿ ಸುಲಿಗೆ ಮಾಡಿದ್ದ ಗ್ಯಾಂಗ್ ಅರೆಸ್ಟ್

ಬೆಂಗಳೂರು: ಎಪ್ರಿಲ್​ 10 ರಂದು ವೀಸಾ ವೆರಿಫಿಕೇಶನ್(Visa Verification)​ಗೆಂದು ಮನೆಗೆ ಬಂದು, ಕೈಕಾಲು ಕಟ್ಟಿ ಸುಲಿಗೆ ಮಾಡಿದ್ದ ಗ್ಯಾಂಗ್​ನ್ನ ಇದೀಗ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಹೌದು ಕುಮಾರಸ್ವಾಮಿ ಲೇಔಟ್(Kumaraswamy Layout)​ ನ ಮುರುಳಿದರ್ ಎಂಬುವವರ ಮನೆಗೆ ವೀಸಾ ವೆರಿಫಿಕೇಶನ್​ಗೆಂದು ಬಂದಿದ್ದ ಗ್ಯಾಂಗ್​. ಕಾಲಿಂಗ್ ಬೆಲ್ ಮಾಡಿ ತಾವು ವೀಸಾ ವೆರಿಫಿಕೇಶನ್​ಗೆ ಬಂದಿದ್ದೆವೆ ಎಂದಿದ್ದರು. ಬಳಿಕ ಆಧಾರ್ ಕಾರ್ಡ್ ಕೊಡಿ ಎಂದು ಕೇಳಿ, ಆಧಾರ್ ಕಾರ್ಡ್ ತರಲು ಹೋಗುತ್ತಿದ್ದಂತೆ ಕೆಳಗೆ ಬಿಳಿಸಿ, ಕೈಕಾಲು ಕಟ್ಟಿ ಹಾಕಿದ್ದಾರೆ. ನಂತರ ಮನೆಯಲ್ಲಿದ್ದ ಚಿನ್ನದ ಒಡವೆಗಳು ಹಾಗೂ 1 ಲಕ್ಷ ನಗದು ದೋಚಿ ಪರಾರಿಯಾಗಿದ್ದರು. ಈ ಕುರಿತು ಪೊಲೀಸ್​ ಠಾಣೆಗೆ ದೂರು ನೀಡಿದ್ದರು.

ಇನ್ನು ದೂರಿನ್ವಯ ತನಿಖೆ ಶುರು ಮಾಡಿದ್ದ ಕುಮಾರಸ್ವಾಮಿ ಲೇಔಟ್ ಪೊಲೀಸರು ಇದೀಗ ಮೂವರನ್ನ ಅರೆಸ್ಟ್ ಮಾಡಿದ್ದಾರೆ. ಸ್ವರೂಪ್, ಅತ್ಮಾನಂದ, ಶಾಲಿಂ ಬಂಧಿತ ಅರೋಪಿಗಳು. ಪಿಜಿ ಒಂದನ್ನು ನಡೆಸುತಿದ್ದ ಸ್ವರೂಪ್, ಅದೇ  ಪಿಜಿಯಲ್ಲಿ ವಾಸ ಮಾಡುತ್ತಿದ್ದ ಶಾಲಿಂ ಮತ್ತು ಅತ್ಮಾನಂದ್​ನನ್ನು ಜೊತೆಗೆ ಸೇರಿಸಿಕೊಂಡು ಕೃತ್ಯ ಎಸಗಿದ್ದರು. ವಿಚಾರಣೆ ವೇಳೆ ಇನ್ನು ಹಲವಾರು ಕಡೆ ಸುಲಿಗೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಅರೋಪಿಗಳ ಅರೆಸ್ಟ್ ಮಾಡಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ತನಿಖೆ ಬಳಿಕವೇ ಇನ್ನಷ್ಟು ಸತ್ಯಾಸತ್ಯತೆ ಗೊತ್ತಾಗಲಿದೆ.