ಗ್ಯಾಸ್ ಏಜೆನ್ಸಿ ಸಮೀಪದ ಸ್ಕ್ರಾಪ್ ಗೋಡೌನಲ್ಲಿ ಅಗ್ನಿ ಅವಘಡ

ಬೆಂಗಳೂರು: ಗೋಡೌನಲ್ಲಿ ಅಗ್ನಿ ಅವಘಡ ಸಂಭವಿಸಿ ಮೂರು ಬಸ್ (Bus Fire) ಗಳು ಬೆಂಕಿಗಾಹುತಿಯಾದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

ಆರ್‍ಆರ್ ನಗರ (RR Nagar) ದ ಐಟಿಐ ಲೇಔಟ್ ನ ಇಂಡೆನ್ ಗ್ಯಾಸ್ ಏಜೆನ್ಸಿ ಸಮೀಪದಲ್ಲಿರುವ ಸ್ಕ್ರಾಪ್ ಗೋಡೌನಲ್ಲಿ ಈ ಅವಘಡ ಸಂಭವಿಸಿದೆ. ಬೆಂಕಿ ತಗುಲಿ ಇಡೀ ಗೋಡೌನ್ ಧಗ-ಧಗನೆ ಹೊತ್ತಿ ಉರಿದಿದೆ. ಪರಿಣಾಮ ಮೂರು ಬಸ್‍ಗಳು ಸುಟ್ಟು ಕರಕಲಾಗಿವೆ. ಬೆಂಕಿ ಜ್ವಾಲೆ ವ್ಯಾಪಿಸದಂತೆ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ.

ಆರ್ ಆರ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದೆ.