ಮದ್ಯ ಸೇವಿಸಿ ಎರಡು ಆಟೋ ಹಾಗೂ ಒಂದು ಬೈಕ್​ಗೆ ಡಿಕ್ಕಿ: ಕಾರ್ ಚಾಲಕನಿಗೆ ಮಹಿಳೆಯಿಂದ ಚಪ್ಪಲಿ ಸೇವೆ

ವಿಜಯಪುರ: ಮದ್ಯ ಸೇವಿಸಿ (alcohol) ಅಡ್ಡಾದಿಡ್ಡಿ ಕಾರ್ ಚಾಲನೆ ಮಾಡಿ ಅಪಘಾತ ಮಾಡಿದ ಕಾರ್ ಚಾಲಕನಿಗೆ ಮಹಿಳೆ ಒಬ್ಬರು ಚಪ್ಪಲಿಯಲ್ಲಿ ಹೊಡೆದಿರುವಂತಹ ಘಟನೆ ವಿಜಯಪುರ ನಗರದ ಸ್ಟೇಷನ್ ರಸ್ತೆಯಲ್ಲಿ ಗುರುವಾರ ರಾತ್ರಿ ನಡೆದಿದೆ. ಎಣೆ ಮತ್ತಲ್ಲಿ ಅಡ್ಡಾದಿಡ್ಡಿ ಕಾರ್ ಚಾಲನೆ ಮಾಡಿ ಎರಡು ಆಟೋ ಹಾಗೂ ಒಂದು ಬೈಕ್​ಗೆ ಕಾರು ಡಿಕ್ಕಿ ಹೊಡೆದಿದ್ದು, ಪರಿಣಾಮ ಆಟೋ ಪಲ್ಟಿ ಆಗಿದೆ. ಸಣ್ಣಪುಟ್ಟ ಗಾಯಗಳಾಗಿವೆ. ಪಲ್ಟಿಯಾದ ಆಟೋದಲ್ಲಿದ್ದ ಮಹಿಳೆಯಿಂದ ಕಾರ್ ಚಾಲಕನಿಗೆ ಚಪ್ಪಲಿ ಸೇವೆ ಮಾಡಿದ್ದಾರೆ. ಬೇಜವಾಬ್ದಾರಿಯಾಗಿ ಹಾಗೂ ಮದ್ಯ ಸೇವಿಸಿ ಕಾರ್ ಚಾಲನೆ ಮಾಡಿ ಅಪಘಾತಕ್ಕೀಡಾಗಿಸಿದಕ್ಕೆ ಮಹಿಳೆ ಆಕ್ರೋಶಗೊಂಡಿದ್ದಾರೆ

ಮಹಿಳೆಯಿಂದ ಕಾರ್ ಚಾಲಕನಿಗೆ ಥಳಿಸುತ್ತಿರುವ ವಿಡಿಯೋ ಇಂದು ವೈರಲ್​ ಆಗಿದೆ. ಸದ್ಯ ಕಾರ್ ಚಾಲಕನನ್ನು ಪೊಲೀಸರು ವಶಕ್ಕೆ ಪಡೆಯಲಾಗಿದೆ. ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿ ಘಟನೆ ದಾಖಲಾಗಿದೆ.