ವೋಟ್ ಹಾಕುವಾಗ ಕಿರಿಕ್: ಕಾಂಗ್ರೆಸ್ ಕಾರ್ಯಕರ್ತನ ವಿರುದ್ಧ ದೂರು ದಾಖಲು


ಬೆಂಗಳೂರು: ಇವಿಎಂ (EVM) ಹ್ಯಾಕ್ ಆಗಿದೆ, ಒಂದು ಪಕ್ಷಕ್ಕೆ ಮತ ಹಾಕಿದರೇ ಬೇರೆ ಪಕ್ಷಕ್ಕೆ ಮತ ಬಿದ್ದಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದ ವ್ಯಕ್ತಿ ವಿರುದ್ಧ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಂಗ್ರೆಸ್ (Congress) ಕಾರ್ಯಕರ್ತ ಸೈಯದ್ ಇಮಾದುಲ್ಲಾ ಎಂಬಾತ ಮೇ 10 ರಂದು ಮಧ್ಯಾಹ್ನ 2:40ಕ್ಕೆ ಮತದಾನ‌ ಮಾಡಲು ಆಡುಗೋಡಿಯ ಚಿನ್ನಯ್ಯನಪಾಳ್ಯದ ಮತದಾನ ಕೇಂದ್ರಕ್ಕೆ ಆಗಮಿಸಿ, ಮತ ಚಲಾಯಿಸಿದ್ದಾರೆ. ಮತದಾನದ ಬಳಿಕ ನಾನು ಒಂದು ಪಕ್ಷದ ಚಿಹ್ನೆಗೆ ಮತ ಹಾಕಿದರೇ ಬೇರೆ ಪಕ್ಷಕ್ಕೆ ಮತ ಬಿದ್ದಿದೆ, ಇವಿಎಂ ಹ್ಯಾಕ್ ಆಗಿದೆ ಅಂತ ಕೆಲ ಮುಖಂಡರನ್ನು ಕರೆಸಿ ರಂಪಾಟ ಮಾಡಿದ್ದಾರೆ.

ತಕ್ಷಣವೇ ಅಲರ್ಟ್ ಆದ ಚುನಾವಣಾ ಅಧಿಕಾರಿಗಳು, ಕೂಡಲೇ ಮತದಾನವನ್ನು ನಿಲ್ಲಿಸಿ ಇವಿಎಂ ಅನ್ನು ಪರಿಶೀಲನೆ ಮಾಡಿದ್ದಾರೆ. ಸುಮಾರು ಒಂದು ಗಂಟೆ ಪರಿಶೀಲನೆ ಬಳಿಕ ಇವಿಎಂ ಸರಿಯಾಗಿ ಇದೆ, ನೀವು ವೋಟ್ ಮಾಡಿರುವ ಪಕ್ಷಕ್ಕೆನೇ ನಿಮ್ಮ ವೋಟ್ ಹೋಗಿದೆ ಎಂದು ತಿಳಿಸಿದ್ದಾರೆ. ಇದರಿಂದ ಸುಮಾರು 1 ಗಂಟೆ ಮತದಾನ ಪ್ರಕ್ರಿಯೆ ಸ್ಥಗಿತಗೊಂಡಿತ್ತು.
ಚುನಾವಣಾ ಕರ್ತವ್ಯಕ್ಕೆ ಅಡ್ಡಿ, ಗಲಾಭೆ ಸೃಷ್ಟಿಸುವ ಉದ್ದೇಶದಿಂದ ಸುಳ್ಳು ಸುದ್ದಿ ಪ್ರಚಾರ ಮಾಡಿದ ಆರೋಪದ ಮೇಲೆ ಐಪಿಸಿ 177 ಅಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸೈಯದ್ ಇಮಾದುಲ್ಲಾರನ್ನು ಬಂಧಿಸಿದ್ದಾರೆ. ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದಾಗ ನಾಟಕ ಆಡಿರುವುದು ಬೆಳಕಿಗೆ ಬಂದಿದೆ.

ಮ್ಮ ಮತ ಬೇರೆ ಪಕ್ಷಕ್ಕೆ ಹೋದರೆ ಏನು ಮಾಡಬೇಕು?
ನೀವು ಮತ ಚಲಾಯಿಸಿದ ನಂತರ, ಧೃಡಿಕರಣದ ಕಾಗದದಲ್ಲಿ ನೀವು ಮತ ಚಲಾಯಿಸಿದ ಪಕ್ಷದ ಚಿಹ್ನೆ ಕಾಣದೆ, ಬೇರೆ ಚಿಹ್ನೆ ಕಂಡರೇ ಕೂಡಲೆ ಮತ್ತಗಟ್ಟೆ ಅಧಿಕಾರಿಗೆ (BLO) ಗೆ ವಿಷಯ ತಿಳಿಸಬೇಕು.
ಆಗ ಅಧಿಕಾರಿ 49MA ಎಂಬುವುದರ ಕುರಿತು ನಿಮಗೆ ವಿವರಿಸುತ್ತಾರೆ. ನಂತರ ನಿಮಗೆ ಧೃಡಿಕರಣ ಫಾರಂ ನೀಡುತ್ತಾರೆ. ನೀವು ಧೃಡಿಕರಣ ಫಾರಂ ತುಂಬಿ ಮತಗಟ್ಟೆ ಅಧಿಕಾರಿಗೆ ನೀಡಬೇಕು. ಆಗ ಅಧಿಕಾರಿಗಳು ಇವಿಎಂ ಅನ್ನು ಪರಿಶೀಲಿಸುತ್ತಾರೆ. ನೀವು ಹೇಳಿದ್ದು ನಿಜವಾಗಿದ್ದರೇ ನಿಮಗೆ ಮತ್ತೊಮ್ಮೆ ಮತದಾನ ಮಾಡಲು ಅವಕಾಶ ನೀಡಲಾಗುತ್ತದೆ. ಅಲ್ಲದೇ ಮತಗಟ್ಟೆ ಅಧಿಕಾರಿ, ಮೇಲಧಿಕಾರಿಗಳಿಗೆ ವಿಷಯ ತಿಳಿಸಿ ಮತದಾನ ಪ್ರಕ್ರಿಯೆಯನ್ನು ಸ್ಥಗಿತಗೊಳಿಸುತ್ತಾರೆ.
ಒಂದು ವೇಳೆ ನೀವು ಸುಳ್ಳು ಹೇಳಿದ್ದರೇ IPC ಸೆಕ್ಷನ್ 177ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗುತ್ತದೆ. 6 ತಿಂಗಳವರೆಗೆ ಸರಳ ಸೆರೆವಾಸ ಅಥವಾ 1,000 ರೂ. ದಂಡ ಅಥವಾ ಎರಡನ್ನೂ ವಿಧಿಸಬಹುದು