ಕಾರು-ಬೈಕ್ ನಡುವೆ ಭೀಕರ ಅಪಘಾತ, ಸ್ಥಳದಲ್ಲೆ ಇಬ್ಬರು ಸಾವು: ದ್ವೇಷಕ್ಕೆ ನಡೆಯಿತಾ ಅಪಘಾತ ರೀತಿಯ ಕೊಲೆ?.

ಬೆಂಗಳೂರು: ಬೆಳ್ಳಂ ಬೆಳಗ್ಗೆ ನಡು ರಸ್ತೆಯಲ್ಲಿ ಭೀಕರ ಅಪಘಾತ (Accident) ನಡೆದಿದೆ. ಅಪಘಾತದ ರಬಸಕ್ಕೆ ಬೈಕ್ ಒಂದಷ್ಟು ದೂರ ಹೋಗಿ ಬಿದ್ದಿದ್ರೆ, ಕಾರಿನ ಮುಂಭಾಗ ಜಖಂಗೊಂಡಿದೆ. ಇನ್ನು ಮೆಲ್ನೋಟಕ್ಕೆ ಇದು ಅನೀರಿಕ್ಷಿತ ಆಕ್ಸಿಡೆಂಟ್ ಎಂದು ನೋಡಿದವರಿಗೆ ಅನ್ನಿಸಿದ್ರು, ಇಲ್ಲಿ ಕಣ್ಣೀರಾಕುತ್ತಾ ದುಖಃದಲ್ಲೆ ಆಕ್ರಂಧನ ಹೊರ ಹಾಕುತ್ತಿರುವ ಇವರು ಹೇಳುತ್ತಿರುವದನ್ನ ಕಂಡು ಪೊಲೀಸರೆ ಒಂದು ಕ್ಷಣ ಬೆಚ್ಚಿ ಬಿದ್ದಿದ್ದಾರೆ. ಹೌದು ಅಂದಹಾಗೆ ಇಂತಹ ಭೀಕರ ಅಪಘಾತದಲ್ಲಿ ದುರ್ಮರಣಕ್ಕೀಡಾಗಿರುವ ದುರ್ದೈವಿಗಳು ನಾಗರಾಜ್ ಮತ್ತು ರಾಮಯ್ಯ. ಬೆಂಗಳೂರು ನಗರ ಜಿಲ್ಲೆಯ ಯಲಹಂಕ ತಾಲೂಕಿನ ಚಲ್ಲಹಳ್ಳಿ ಗ್ರಾಮದವರಾದ ಇವರು ರಾಜಾನುಕುಂಟೆಯ ಪ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ನಿನ್ನೆ(ಮೇ.11) ಬೆಳಗ್ಗೆ ಎಂದಿನಂತೆ ಗ್ರಾಮದಿಂದ ಇಬ್ಬರು ಸ್ನೇಹಿತರು ಕಾಕೋಳು ರಸ್ತೆ ಮೂಲಕ ಕೆಲಸಕ್ಕೆಂದು ಬೈಕ್ ನಲ್ಲಿ ಹೊರಟಿದ್ರು. ಈ ವೇಳೆ ಚಲ್ಲಹಳ್ಳಿ ಗೇಟ್ ಬಳಿ ಕಾಕೋಳು ರಸ್ತೆಯಲ್ಲಿ ಬಂದ ಸ್ವಿಪ್ಟ್ ಕಾರು ನೋಡ ನೋಡುತ್ತಿದ್ದಂತೆ ಬೈಕ್​ಗೆ ಡಿಕ್ಕಿ ಹೊಡೆದಿದ್ದು, ಡಿಕ್ಕಿಯ ರಬಸಕ್ಕೆ ಬೈಕ್ ಒಂದಷ್ಟು ದೂರ ಹೋಗಿ ಬಿದ್ದಿದ್ರೆ, ಬೈಕ್​ನಲ್ಲಿದ್ದವರು ರಸ್ತೆಯಲ್ಲಿ ಬಿದ್ದು ಸಾವನ್ನಪಿದ್ದಾರೆ.

ಇನ್ನು ಮೆಲ್ನೂಟಕ್ಕೆ ಅಚಾನಕ್ಕಾಗಿ ಆದ ಅಪಘಾತ ಅಂತಲೇ ಎಲ್ಲರೂ ಅಂದುಕೊಂಡು ರಾಜಾನುಕುಂಟೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಬಾಡಿಗಳನ್ನ ಶಿಪ್ಟ್ ಮಾಡಿಸಿ ಕಾರು ಚಾಲಕ ಭರತ್ ಎಂಬುವವನನ್ನ ವಶಕ್ಕೆ ಪಡೆದಿದ್ರು. ಆದ್ರೆ, ಅಷ್ಟರಲ್ಲೆ ಠಾಣೆ ಮುಂದೆ ಜಮಾಯಿಸಿದ ಸಂಬಂಧಿಕರು ಅಪಘಾತದ ಕೇಸ್​ಗೆ ಕೊಲೆ ಎನ್ನುವ ಅನುಮಾನದ ಟ್ವಿಸ್ಟ್ ನೀಡಿದ್ದಾರೆ. ಮೃತ ನಾಗರಾಜ್ ಮತ್ತು ರಾಮಯ್ಯ ಕಳೆದ ಹಲವು ವರ್ಷಗಳಿಂದ ಜೊತೆಯಲ್ಲೆ ಕೆಲಸಕ್ಕೆ ಹೋಗಿ ಬರ್ತಿದ್ದು, ಕಳೆದ ವಾರ ಕೆಲಸ ಮುಗಿಸಿಕೊಂಡು ಹೋಟೆಲ್ ಒಂದರ ಬಳಿ ಹೋಗಿ ಊಟ ಮಾಡಿ ನೀರು ಕುಡಿಯುತ್ತಿದ್ದನಂತೆ. ಈ ವೇಳೆ ಕಾರು ಚಾಲಕ ಆರೋಪಿ ಭರತ್ ಜಾತಿ ನಿಂದನೆ ಮಾಡಿ ಗಲಾಟೆ ಮಾಡಿ ನಾಗರಾಜ್ ಮೇಲೆ ಹಲ್ಲೆ ಮಾಡಿದ್ದ ಎಂದು ನಾಗರಾಜ್ ತಂದೆ ಆರೋಪಿಸಿದ್ದಾನೆ. ಅಲ್ಲದೆ ಇದೇ ದ್ವೇಷದಿಂದಲೇ ಕಾದುಕೊಂಡಿದ್ದು, ಬೈಕ್​ಗೆ ಡಿಕ್ಕಿ ಹೊಡೆದು ಕೊಲೆ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ. ಮೃತನ ತಂದೆಗೆ ಕೆಲ ದಲಿತ ಸಂಘಟನೆಗಳ ಮುಖಂಡರು ಸಹ ಸಾಥ್ ನೀಡಿದ್ದು, ರಾಜಾನುಕುಂಟೆ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿದ್ದಾರೆ.ಒಟ್ಟಾರೆ ಬೆಳ್ಳಂ ಬೆಳಗ್ಗೆ ಗ್ರಾಮದ ಹೊರ ವಲಯದಲ್ಲಿ ನಡೆದ ಅಪಘಾತ ಮೃತರ ಕುಟುಂಬಸ್ಥರಲ್ಲಿ ಹಲವು ಅನುಮಾನಗಳನ್ನ ಹುಟ್ಟು ಹಾಕಿದೆ. ಈ ಬಗ್ಗೆ ರಾಜಾನುಕುಂಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದು, ಪೊಲೀಸರ ತನಿಖೆಯಿಂದಷ್ಟೆ ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎನ್ನುವುದು ಬೆಳಕಿಗೆ ಬರಬೇಕಿದೆ.