ಬಿಜೆಪಿ ಅಭ್ಯರ್ಥಿ ಮಗನಿಂದ ದುಡ್ಡು ಹಂಚಿಕೆ! ಯಾದಗಿರಿ ಜೆಡಿಎಸ್‌ ಅಭ್ಯರ್ಥಿಯಿಂದ ಹಣ ಹಂಚಿಕೆ‌ ಆರೋಪ

ಬೀದರ್ : ಭಾಲ್ಕಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಕಾಶ್ ಖಂಡ್ರೆ ಮಗನಿಂದ ದುಡ್ಡು ಹಂಚುತ್ತಿರುವ ವಿಡಿಯೋ ವೈರಲ್ ಆಗಿದೆ. ಪ್ರಕಾಶ್ ಖಂಡ್ರೆ ಮಗ ಗುರುಪ್ರಸಾದ್, ಸೊಸೆಯಿಂದ ಮತದಾರರಿಗೆ ಹಣ ಹಂಚಿಕೆ. ದುಡ್ಡು ಕೊಟ್ಟು ಕಮಲ ಚಿನ್ಹೆಗೆ ಮತ ಹಾಕುವಂತೆ ಆಣೆ-ಪ್ರಮಾಣ ಮಾಡಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ದುಡ್ಡು ಹಂಚುತ್ತಿರುವ ವಿಡಿಯೋ ವೈರಲ್ ಆಗಿದೆ.

ಯಾದಗಿರಿ ಜೆಡಿಎಸ್‌ ಅಭ್ಯರ್ಥಿಯಿಂದ ಹಣ ಚಿಕೆ‌ ಹಂಆರೋಪ:

ಯಾದಗಿರಿ ಜಿಲ್ಲೆಯ ಗುರುಮಠಕಲ್‌ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಶರಣಗೌಡ ಕಂದಕೂರ್ ಎಪಿಎಂಸಿ ಯಾರ್ಡ್ ನಲ್ಲಿರುವ ತಮ್ಮ‌ ಅಂಗಡಿಯಲ್ಲಿ ಹಣ ಹಂಚಿಕೆ ಮಾಡಿರುವ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ದೂರಿನ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ತಡರಾತ್ರಿ ಚುನಾವಣಾ ಅಧಿಕಾರಿಗಳಿಂದ ಪರಿಶೀಲನೆ ನಡೆದಿದೆ.
ಮತದಾರರನ್ನ ಸೇರಿಸಿ ಹಣ ಹಂಚಲಾಗುತ್ತಿದೆ ಎಂದು ಬಿಜೆಪಿ ಅಭ್ಯರ್ಥಿ ಲಲಿತಾ ಅನಪುರ ಅವರಿಂದ‌ ದೂರು ದಾಖಲಾಗಿತ್ತು. ಹೀಗಾಗಿ ಸ್ಥಳಕ್ಕೆ‌ ದೌಡಾಯಿಸಿದ ಪ್ಯಾರಾ ಮಿಲಿಟರಿ ಪೋರ್ಸ್‌ ಹಾಗೂ ಪೊಲೀಸರು ಸ್ಥಳದಲ್ಲೇ‌ ಇದ್ದ‌ ಜನರನ್ನು ವಿಚಾರಣೆ ನಡೆಸಿದರು. ಅಂಗಡಿಯ ಪ್ರತಿಯೊಂದು ಕೋಣೆಗಳ‌ನ್ನು ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಯಾವುದೇ ಹಣ ಪತ್ತೆಯಾಗದ ಕಾರಣ ಅಧಿಕಾರಿಗಳು ವಾಪಸ್ ಹೋದರು ಎಂದು ತಿಳಿದುಬಂದಿದೆ.