ಎಲ್‍ಕೆಜಿ ಮಕ್ಕಳ ಶಾಲಾ ದಾಖಲಾತಿಗೆ ವಯೋಮಿತಿ ನಿಗದಿ – 4 ವರ್ಷ ಕಡ್ಡಾಯ

ಬೆಂಗಳೂರು: ಎಲ್‍ಕೆಜಿ (LKG)ಮಕ್ಕಳ ಶಾಲಾ ದಾಖಲಾತಿಗೆ ನಾಲ್ಕು ವರ್ಷ ವಯೋಮಿತಿ ನಿಗದಿಪಡಿಸಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ಈ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಮಕ್ಕಳನ್ನು ಎಲ್‍ಕೆಜಿಗೆ ಸೇರಿಸಲು ಮಗುವಿಗೆ 4 ವರ್ಷ ತುಂಬಿರಬೇಕು. 2025 ಹಾಗೂ 26ನೇ ಸಾಲಿನ ಶೈಕ್ಷಣಿಕ ವರ್ಷದಿಂದ ಒಂದನೇ ತರಗತಿಯ ದಾಖಲಾತಿಗೆ 6ವರ್ಷ ಪೂರ್ಣಗೊಂಡಿರುವುದು ಕಡ್ಡಾಯ ಎಂಬ ನಿಯಮ ಜಾರಿ ಮಾಡಲಾದ ಹಿನ್ನಲೆಯಲ್ಲಿ ಎಲ್‍ಕೆಜಿಗೆ ಈ ವಯಸ್ಸನ್ನು ನಿಗದಿ ಪಡಿಸಲಾಗಿದೆ. ಮುಂದಿನ ಸಾಲಿನಿಂದ ಒಂದನೇ ತರಗತಿಗೆ ದಾಖಲಾಗಲು 6 ವರ್ಷ ಕಡ್ಡಾಯ ಎಂದು ಇಲಾಖೆ ಆದೇಶದಲ್ಲಿ ಉಲ್ಲೇಖಿಸಿದೆ.
ಒಂದನೇ ತರಗತಿಗೆ 6ವರ್ಷ ತುಂಬಿರಬೇಕು ಎಂಬ ಕಡ್ಡಾಯ ನಿಯಮದ ಹಿನ್ನಲೆಯ ಪೂರ್ವ ತಯಾರಿಯಾಗಿ ಈ ವರ್ಷದಿಂದ ಎಲ್‍ಕೆಜಿ ದಾಖಲಾತಿಗೆ 4ವರ್ಷ ನಿಗದಿ ಪಡಿಸಿ ಆದೇಶ ಹೊರಡಿಸಲಾಗಿದೆ. ಕಡ್ಡಾಯ ಶಿಕ್ಷಣ ನೀತಿ 2009 ಹಾಗೂ 2012ರ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ನಿರ್ಧರಿಸಿರುವ ಶಿಕ್ಷಣ ಇಲಾಖೆ ಈ ಕ್ರಮಕ್ಕೆ ಮುಂದಾಗಿದೆ.