ಭಾರತದ ‘ಸ್ಟೀಲ್ ಮ್ಯಾನ್’ ಜಮ್‌ಶೆಡ್‌ ಜೆ ಇರಾನಿ ನಿಧನ

ನವದೆಹಲಿ: ಭಾರತದ ಸ್ಟೀಲ್‌ ಮ್ಯಾನ್‌ ಎಂದೇ ಖ್ಯಾತರಾಗಿದ್ದ ಡಾ. ಜಮ್‌ಶೆಡ್‌ ಜೆ ಇರಾನಿ ಸೋಮವಾರ ತಡರಾತ್ರಿ ಜೇಮ್ ಶೇಡ್ ಪುರದಲ್ಲಿ ನಿಧನರಾಗಿದ್ದಾರೆ. ಟಾಟಾ ಸ್ಟೀಲ್‌ನಲ್ಲಿ 43 ವರ್ಷಗಳ ಕಾಲ ಸೇವೆ ಸಲ್ಲಿಸಿದ ಪದ್ಮಭೂಷಣ ಡಾ. ಜೆಜೆ ಇರಾನಿ ಪಾತ್ರರಾಗಿದ್ದರು. ಇರಾನಿ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಟಾಟಾ ಸ್ಟೀಲ್‌ನೊಂದಿಗೆ ಸಂಬಂಧ ಹೊಂದಿದ್ದರು. ಅವರು ಜೂನ್ 2011 ರಲ್ಲಿ ಟಾಟಾ ಸ್ಟೀಲ್ ಮಂಡಳಿಯಿಂದ ನಿವೃತ್ತರಾದರು. 43 ವರ್ಷಗಳ ಅಮೋಘ ಸೇವೆ ನೀಡಿ, ಟಾಟಾ ಸ್ಟೀಲ್‌ಗೆ ವಿವಿಧ ಕ್ಷೇತ್ರಗಳಲ್ಲಿ ಅಂತಾರಾಷ್ಟ್ರೀಯ ಖ್ಯಾತಿ ತಂದು ಕೊಟ್ಟಿದ್ದರು.