ಯಲ್ಲಾಪುರ: ತಾಲೂಕಿನಿಂದ ಶಿರಸಿ ಶೈಕ್ಷಣಿಕ ಜಿಲ್ಲಾ ಮಟ್ಟಕ್ಕೆ ಪ್ರತಿನಿಧಿಸಿದ ವಜ್ರಳ್ಳಿಯ ಸರ್ವೋದಯ ಪ್ರೌಢಶಾಲೆಯ ವಿದ್ಯಾರ್ಥಿನಿಯರು ಪ್ರದರ್ಶಿಸಿದ ವಿಜ್ಞಾನದ ‘ಅಕಟಕಟಾ’ ಶೀರ್ಷಿಕೆಯ ನಾಟಕವು ಜಿಲ್ಲಾ ಮಟ್ಟದಲ್ಲಿ ಎರಡನೇ ಸ್ಥಾನಪಡೆದಿದೆ.
ಶಿರಸಿಯಲ್ಲಿ ಜರುಗಿದ ಸ್ಪರ್ಧೆಯಲ್ಲಿ ಹತ್ತು ಪ್ರೌಢಶಾಲೆಯ ನಾಟಕ ತಂಡಗಳಲ್ಲಿ ವಜ್ರಳ್ಳಿಯ ಸರ್ವೋದಯ ಪ್ರೌಢಶಾಲೆಯ ತಂಡವೂ ಭಾಗವಹಿಸಿತ್ತು. ಸ್ಪರ್ಧೆಯಲ್ಲಿ ವಿಜೇತರಾದ ವಜ್ರಳ್ಳಿಯ ಸರ್ವೋದಯ ಪ್ರೌಢಶಾಲೆಯ ವಿದ್ಯಾರ್ಥಿನಿಯರು ದ್ವಿತೀಯ ಸ್ಥಾನ ಪಡೆದು ಪ್ರಶಸ್ತಿ ಪತ್ರ, ನಗದು ಬಹುಮಾನದ ಗೌರವವನ್ನು ನಿರ್ಣಾಯಕರಿಂದ ಸ್ವೀಕರಿಸಿದರು.
ಆರೋಗ್ಯ ಲಸಿಕೆಯ ಮಹತ್ವಸಾರುವ “ಅಕಟಕಟಾ” ನಾಟಕದಲ್ಲಿ ಸುಮೇಧಾ ಗಾಂವ್ಕಾರ, ದೀಕ್ಷಾ ಭಟ್ಟ, ಶ್ವೇತಾ ಗಾಂವ್ಕಾರ, ಸಿಂಧು ಆಚಾರಿ, ಧನ್ಯಶ್ರೀ ಕೋಮಾರ, ಭಾವನಾ ಭಟ್ಟ, ಗೌತಮಿ ಕೋಮಾರ, ವಿದ್ಯಾ ನಾಯ್ಕ, ಭೂಮಿಕಾ, ನಾಗಶ್ರೀ, ಪವಿತ್ರಾ, ರಕ್ಷಿತಾ ಭಾಗವಹಿಸಿದ್ದರು.
ನಾಟಕ ಸ್ಪರ್ಧೆಯಲ್ಲಿ ಸಾಧನೆ ಮಾಡಿ ವಿಜೇತರಾದ ವಿದ್ಯಾರ್ಥಿನಿಯರನ್ನು ಸರ್ವೋದಯ ಶಿಕ್ಷಣ ಸಮಿತಿ ಹಾಗೂ ಶಿಕ್ಷಕ ವೃಂದ ಅಭಿನಂದಿಸಿದೆ. ಈ ಸಂದರ್ಭದಲ್ಲಿ ಸರ್ವೋದಯ ಶಿಕ್ಷಣ ಸಮಿತಿಯವರು, ಪ್ರೌಢಶಾಲೆಯ ವಿಜ್ಞಾನ ಶಿಕ್ಷಕಿ ಸರೋಜಾ ಭಟ್ಟ, ಶಿಕ್ಷಕರಾದ ಚಿದಾನಂದ ಹಳ್ಳಿ, ರವೀಂದ್ರ ಗಾಂವ್ಕಾರ, ದತ್ತಾತ್ರೇಯ ಭಟ್ಟ ಹಾಗೂ ಮುಂತಾದವರು ಉಪಸ್ಥಿತರಿದ್ದರು.